ಕೊನೆಗೂ ಪೊಲೀಸರಿಗೆ ಯಶಸ್ಸು ಸಿಕ್ಕಿದೆ..! ತಿಂಗಳ ಹಂಟ್‌ಗೆ ಬಂತು ಅಂತ್ಯ..! ಧಾರವಾಡ ಹೊರವಲಯದ ತಡಸಿನಕೊಪ್ಪದಲ್ಲಿ ಮೇ 26ರಂದು ನಡೆದಿದ್ದ ಶೂಟೌಟ್ ಪ್ರಕರಣದಲ್ಲಿ ಪೊಲೀಸರ ನಿದ್ದೆ ಕೆಡಿಸಿದ್ದ ಪ್ರಮುಖ ಆರೋಪಿ ಸುಂದರ್ ಪೌಲ್ ಕೊನೆಗೂ ಖಾಕಿ ಬಲೆಗೆ ಬಿದ್ದಿದ್ದಾನೆ…
ವಿವಾದಿತ ಜಮೀನು ವಿಚಾರವಾಗಿ ನಡೆದ ಗಲಾಟೆ ಕ್ಷಣಾರ್ಧದಲ್ಲೇ ಫೈರಿಂಗ್‌ಗೆ ತಿರುಗಿ ಭಾರೀ ಆತಂಕ ಸೃಷ್ಟಿಸಿತ್ತು. ಘಟನೆ ಬಳಿಕ ಹಲವು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರೂ, ಪ್ರಕರಣದ ಪ್ರಮುಖ ಆರೋಪಿ ಸುಂದರ್ ಪೌಲ್ ಮಾತ್ರ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದ…
ಬಂಧನದಿಂದ ತಪ್ಪಿಸಿಕೊಳ್ಳಲು ಆರೋಪಿ ಬೆಂಗಳೂರು, ಕೊಡೈಕೆನಾಲ್, ಗೋವಾ, ಜಾರ್ಖಂಡ್, ಓಡಿಶಾ, ಸಿಲಿಗುರಿ, ಗೋರಖಪುರ, ವಾರಾಣಸಿ ಮಾತ್ರವಲ್ಲದೆ ನೇಪಾಳ ವರೆಗೂ ಓಡಾಡಿದ್ದಾನೆ ಎನ್ನಲಾಗಿದೆ…

ಆದರೆ ಎಷ್ಟೇ ರಾಜ್ಯದಿಂದ ರಾಜ್ಯಕ್ಕೆ ಎಸ್ಕೇಪ್ ಆದರೂ, ಕೊನೆಗೆ ಪೊಲೀಸರ ಬಲೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ವಿಶೇಷ ಪೊಲೀಸ್ ತಂಡದ ನಿರಂತರ ಹಂಟ್ ಫಲವಾಗಿ, ತಮಿಳುನಾಡಿನ ನಾಗಪಟ್ಟಣಂನಲ್ಲಿ ಗುರುತು ಮರೆಮಾಚಿ ತಂಗಿದ್ದ ಸುಂದರ್ ಪೌಲ್‌ನನ್ನು ಹುಬ್ಬಳ್ಳಿ-ಧಾರವಾಡ ನಗರ ಪೊಲೀಸರು ಬಂಧಿಸಿ ಕರೆತಂದಿದ್ದಾರೆ…
ನೇಪಾಳವರೆಗೂ ಓಡಿದರೂ ಪ್ರಯೋಜನವಾಗಲಿಲ್ಲ… ಕೊನೆಗೆ ಖಾಕಿ ಕೈಯಿಂದ ತಪ್ಪಿಸಿಕೊಳ್ಳಲಿಲ್ಲ!
bigtvnews | Hubli Dharwad News | Kannada News | Karnataka News Hubli News | News In Hubli | Local news

