ನವದೆಹಲಿ: ರೈತರ ಸಾಲ ಮನ್ನ ಮಾಡುವವರೆಗೂ ಪ್ರಧಾನಿ ನರೇಂದ್ರ ಮೋದಿಗೆ ನಿದ್ದೆ ಮಾಡಲು ಬಿಡುವುದಿಲ್ಲ ಅಂತ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ಇಂದು ವರದಿಗಾರರೊಂದಿಗೆ ಮಾತನಾಡಿದ ಅವರು, ಮಧ್ಯಪ್ರದೇಶ ಹಾಗೂ ಛತ್ತೀಸ್ಗಢದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ 6 ಗಂಟೆಗಳಲ್ಲಿ ಸಾಲ ಮನ್ನಾ ಘೋಷಣೆ ಮಾಡಿದೆ. ರಾಜಸ್ಥಾನದಲ್ಲೂ ಶೀಘ್ರದಲ್ಲೇ ಮಾಡಲಿದ್ದೇವೆ ಎಂದು ಹೇಳಿದ್ರು.ನೋಡಿದ್ರಾ, ಆಗಲೇ ಕೆಲಸ ಶುರುವಾಗಿದೆ ಎಂದು ಸಂಸತ್ ತಲುಪುತ್ತಿದ್ದಂತೆ ರಾಹುಲ್ ಗಾಂಧಿ ಹೇಳಿದ್ರು. ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಜಯ ಗಳಿಸಿರುವುದು ರೈತರ ಗೆಲುವು. ಪ್ರಧಾನಿ ಮೋದಿ ಬಡ ರೈತರ ಒಂದು ರೂಪಾಯಿಯನ್ನೂ ಮನ್ನಾ ಮಾಡಲಿಲ್ಲ. ಕಾಂಗ್ರೆಸ್ ಆಡಳಿತವಿರುವ ಎಲ್ಲಾ ರಾಜ್ಯಗಳಲ್ಲಿ ರೈತರ ಸಾಲ ಮನ್ನಾ ಆಗಲಿದೆ ಎಂದು ಭರವಸೆ ನೀಡಿದ್ರು. ಹಾಗೇ ಬಿಜೆಪಿಗೂ ಕೂಡ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಲಿದ್ದೇವೆ. ರೈತರ ಸಾಲ ಮನ್ನಾ ಮಾಡುವವರೆಗೆ ಮೋದಿಜೀ ನಿದ್ದೆ ಮಾಡಲು/ ರೆಸ್ಟ್ ಮಾಡಲು ಬಿಡುವುದಿಲ್ಲ ಎಂದರು.ಪ್ರಧಾನಿ ಮೋದಿ ಎರಡು ಭಾರತವನ್ನ ರಚಿಸಿದ್ದಾರೆ. ಅವರಿಗೆ ದೇಶದ ರೈತರ ಬಗ್ಗೆ ಯೋಚನೆಯಿಲ್ಲ, ಬದಲಿಗೆ ತನ್ನ 15 ಉದ್ಯಮಿ ಸ್ನೇಹಿತರ ಬಗ್ಗೆಯೇ ಚಿಂತೆ. ಒಂದು ಕಡೆ ರೈತರು, ಬಡವರು, ಯುವಕರು, ಸಣ್ಣ ವ್ಯಾಪಾರಿಗಳು ಹಾಗೂ ಮತ್ತೊಂದು ಕಡೆ ದೇಶದ ಟಾಪ್ 15 ಉದ್ಯಮಿಗಳು. ₹3,500 ಕೋಟಿಯನ್ನ ಅವರ ಜೇಬಿಗೆ ಹಾಕಿದ್ದಾರೆ ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ರು. ರಫೇಲ್ ಡೀಲ್ ಬಗ್ಗೆ ನಾನು ಮಾತನಾಡಲು ಸಿದ್ಧ ಆದ್ರೆ ಬಿಜೆಪಿ ರೆಡಿ ಇರುವಂತೆ ಕಾಣುತ್ತಿಲ್ಲ ಎಂದರು.
Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73
bigtvnews | Hubli Dharwad News | Kannada News | Karnataka News Hubli News | News In Hubli | Local news





