Breaking News

ಕೆಫೆ ಮಾಲೀಕ, ಕ್ಯಾಶಿಯರ್ ದರ್ಪ – ಡೆಲಿವರಿ ಬಾಯ್ ಮೇಲೆ ಮನಬಂದಂತೆ ಹಲ್ಲೆ!

ಬೆಂಗಳೂರು: ಉಲ್ಲಾಳದ ‘ಕೂಲ್ ಜಂಕ್ಷನ್ ಕೆಫೆ’ಯಲ್ಲಿ ಆನ್‌ಲೈನ್ ಆಹಾರ ಆರ್ಡರ್ ವಿಳಂಬವನ್ನು ಪ್ರಶ್ನಿಸಿದ ಡೆಲಿವರಿ ಬಾಯ್ ಮೇಲೆ ಕೆಫೆ ಮಾಲೀಕ ಹಾಗೂ ಕ್ಯಾಶಿಯರ್ ಹಲ್ಲೆ ನಡೆಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಆರ್ಡರ್ ‘ರೆಡಿ’ ಎಂದು ಆ್ಯಪ್‌ನಲ್ಲಿ ತೋರಿಸಿದ್ದರೂ ಆಹಾರ ಸಿದ್ಧವಾಗಿರಲಿಲ್ಲ. ಇದನ್ನು ಪ್ರಶ್ನಿಸಿದ ಡೆಲಿವರಿ ಬಾಯ್ ಜೊತೆ ಮಾತಿನ ಚಕಮಕಿ ನಡೆದು, ಬಳಿಕ ಕೆಫೆ ಮಾಲೀಕ ರಾಜಣ್ಣ ಮತ್ತು ಕ್ಯಾಶಿಯರ್ ಸೇರಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಘಟನೆ ಸಂಬಂಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಚಿಕಿತ್ಸೆ ಪಡೆದ ಡೆಲಿವರಿ ಬಾಯ್ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Share News

About BigTv News

Check Also

ಅತ್ಯಾಚಾರ ಎಸೆಗಿದವರ ಮೇಲೆ‌ ಪ್ರತೀಕಾರ – ಅಪಹರಣ ಮಾಡಿ ಸಿಕ್ಕಿಬಿದ್ದ ಆರೋಪಿಗಳು!

ಬೆಂಗಳೂರು: ಮಾರತ್ತಹಳ್ಳಿಯಲ್ಲಿ ಸ್ನೇಹಿತನ ಪ್ರೇಯಸಿಯನ್ನು ಕಾಲ್‌ಗರ್ಲ್ ಎಂದು ತಪ್ಪಾಗಿ ಭಾವಿಸಿ ಅತ್ಯಾಚಾರ ಎಸಗಿದ ಆರೋಪದ ಹಿನ್ನೆಲೆಯಲ್ಲಿ, ಪ್ರತೀಕಾರಕ್ಕಾಗಿ ಇಬ್ಬರನ್ನು ಅಪಹರಿಸಿ …

Leave a Reply

Your email address will not be published. Required fields are marked *