ಬೆಳಗಾವಿ: ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ನಡುವೆ ಶುರುವಾದ ಗಲಾಟೆ ತಾರಕಕ್ಕೇರಿ, ಕೊಲೆಯಲ್ಲಿ ಅಂತ್ಯವಾಗಿರುವ ಭೀಕರ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ. ಗಂಡು ಮಗು ಜನಿಸಿದ್ದಕ್ಕೆ ಪಾರ್ಟಿ ಕೇಳಿದ ಸ್ನೇಹಿತನನ್ನೇ ಮತ್ತೊಬ್ಬ ಸ್ನೇಹಿತ ಬರ್ಬರಾವಾಗಿ ಹತ್ಯೆ ಮಾಡಿದ್ದಾನೆ.ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ವಣ್ಣೂರು ಗ್ರಾಮದಲ್ಲಿ ಈ ರಕ್ತಚರಿತ್ರೆ ನಡೆದಿದೆ. ವಣ್ಣೂರು ಗ್ರಾಮದ ನಿವಾಸಿಯಾದ ಹಣಮಂತಪ್ಪ ಇಟಗಿ ಕೊಲೆಯಾದ ದುರ್ದೈವಿ. ಆರೋಪಿ ವಿಶ್ವನಾಥ್ ಪೂಜಾರಿಗೆ ಇತ್ತೀಚೆಗೆ ಗಂಡು ಮಗು ಜನಿಸಿತ್ತು. ಇದೇ ಖುಷಿಯಲ್ಲಿ ಹಣಮಂತಪ್ಪ ತನ್ನ ಸ್ನೇಹಿತ ವಿಶ್ವನಾಥ್ ಬಳಿ ಪಾರ್ಟಿ ಕೊಡುವಂತೆ ಕೇಳಿದ್ದಾನೆ. ಪಾರ್ಟಿ ವಿಚಾರವಾಗಿ ಇಬ್ಬರ ನಡುವೆ ಸಣ್ಣದಾಗಿ ಶುರುವಾದ ವಾಗ್ವಾದ ವಿಕೋಪಕ್ಕೆ ತಿರುಗಿದೆ. ಗಲಾಟೆ ತೀವ್ರಗೊಳ್ಳುತ್ತಿದ್ದಂತೆ ಆಕ್ರೋಶಗೊಂಡ ವಿಶ್ವನಾಥ್ ಪೂಜಾರಿ, ತನ್ನದೇ ಗೆಳೆಯ ಹಣಮಂತಪ್ಪನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

