Breaking News

ಬೆಂಗಳೂರು ತ್ರಿವಳಿ ಕೊಲೆ ಕೇಸ್ ಗೆ ಬಿಗ್ ಟ್ವಿಸ್ಟ್: ಆರೋಪಿಗಳಾದ ಕೆನೆತ್-ಶ್ವೇತಾ ಅಸಲಿಗೆ ಪ್ರೇಮಿಗಳೇ ಅಲ್ಲ!

ಬೆಂಗಳೂರು: ಕೆ.ಆರ್. ಪುರಂ ತ್ರಿವಳಿ ಕೊಲೆ ಪ್ರಕರಣದ ತನಿಖೆಯಲ್ಲಿ ಹಲವು ಬೆಚ್ಚಿಬೀಳಿಸುವ ಸಂಗತಿಗಳು ಬೆಳಕಿಗೆ ಬಂದಿವೆ. ಆರೋಪಿಗಳಾದ ಕೆನೆತ್ ಮತ್ತು ಶ್ವೇತಾ ಪ್ರೇಮಿಗಳಲ್ಲ, ಕೇವಲ ಸ್ನೇಹಿತರಾಗಿದ್ದರು ಎಂದು ಪೊಲೀಸ್ ವಿಚಾರಣೆಯಲ್ಲಿ ತಿಳಿದುಬಂದಿದೆ. ಕೆನೆತ್ ಶ್ವೇತಾಳ ನಂಬಿಕೆ ಗಳಿಸಿ ಸುಮಾರು ₹50 ಲಕ್ಷ ಹಣ ಪಡೆದು ಐಷಾರಾಮಿ ಜೀವನ ನಡೆಸುತ್ತಿದ್ದ ಎನ್ನಲಾಗಿದೆ. ಕೆನೆತ್‌ಗೆ ಮತ್ತೊಬ್ಬ ಪ್ರೇಯಸಿ ಇದ್ದು, ಆಕೆಯಿಂದ ವಿಚಾರ ಮುಚ್ಚಿಡಲು ಎಚ್‌ಎಎಲ್‌ನಲ್ಲಿ ಪ್ರತ್ಯೇಕ ಮನೆ ಬಾಡಿಗೆಗೆ ಪಡೆದಿದ್ದ ಎನ್ನಲಾಗಿದೆ. ಶ್ವೇತಾಳಿಂದ ಪಡೆದ ಹಣವನ್ನೇ ತನ್ನ ಸಂಬಳ ಎಂದು ಮನೆಯವರಿಗೆ ಕಳುಹಿಸುತ್ತಿದ್ದ ಎಂಬ ಆರೋಪವೂ ಕೇಳಿಬಂದಿದೆ. ಬ್ಯಾಂಕ್ ಸಾಲದ ಒತ್ತಡದಿಂದ ಸಂಕಷ್ಟದಲ್ಲಿದ್ದ ಶ್ವೇತಾಳಿಗೆ ಕಳೆದ ಆರು ತಿಂಗಳಿನಿಂದ ಹೆತ್ತವರನ್ನು ಕೊಲೆ ಮಾಡಿದರೆ ಸಮಸ್ಯೆ ಮುಗಿಯುತ್ತದೆ ಎಂದು ಕೆನೆತ್ ಪ್ರಚೋದನೆ ನೀಡಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಬ್ಬರೂ ಆರೋಪಿಗಳನ್ನು ವಶಕ್ಕೆ ಪಡೆದು ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

Share News

About BigTv News

Check Also

ಪ್ರೇಯಸಿ ಕರೆದಿದ್ದಕ್ಕೆ ಬಂದ ಯುವಕ ಸಿಕ್ಕಿಬಿದ್ದ: ಸ್ನೇಹಿತರ ಸಮೇತ ಕಂಬಕ್ಕೆ ಕಟ್ಟಿ ಥಳಿಸಿದ ಗ್ರಾಮಸ್ಥರು!

ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಬತ್ತಿಕೊಪ್ಪ ಗ್ರಾಮದಲ್ಲಿ ಪ್ರೀತಿಸಿದ ಯುವತಿಯನ್ನು ಮದುವೆಯಾಗಲು ಬಂದ ಪ್ರಮೋದ್ ಹಾಗೂ ಆತನ ಸ್ನೇಹಿತರಾದ ಪ್ರಕಾಶ್, …

Leave a Reply

Your email address will not be published. Required fields are marked *