Breaking News

ಅನಂತ’ ಕುಮಾರ್ ನಡೆದು ಬಂದ ರಾಜಕೀಯ ಹಾದಿ

ಬೆಂಗಳೂರು: ಸಂಸದೀಯ ವ್ಯವಹಾರಗಳು ಹಾಗೂ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಕೇಂದ್ರ ಸಚಿವ ಎಚ್.ಎನ್. ಅನಂತ್ ಕುಮಾರ್ ರಾಜಕೀಯವಾಗಿ ಬಿಜೆಪಿ ಪಕ್ಷವನ್ನು ಬೆಳಸಿದವರು. ರಾಜ್ಯದಲ್ಲಿ ಬಿಜೆಪಿಯನ್ನು ಬಲಾಢ್ಯಗೊಳಿಸಿ ಕೇಂದ್ರದಲ್ಲಿ ಮೂರು ಬಾರಿ ಸಚಿವರಾದವರು. ಪಕ್ಷದ ಮತ್ತೊಬ್ಬ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ ಜತೆಗೂಡಿ ರಾಜ್ಯದಲ್ಲಿ ಬಿಜೆಪಿ ಪಕ್ಷದ ಬೆಳವಣಿಗೆಗೆ ಅಡಿಗಲ್ಲು ಹಾಕಿದವರು.ಬಿಜೆಪಿ ರಾಜ್ಯ ನಾಯಕರೊಂದಿಗೆ ಅನ್ಯೋನ್ಯವಾಗಿ ಗುರುತಿಸಿಕೊಂಡಿದ್ದ ಹಿರಿಯ ನಾಯಕ ಅನಂತ್​ಕುಮಾರ್​​ ರಾಜಕೀಯವಾಗಿ ಅತ್ಯಂತ ಸಕ್ರಿಯರಾಗಿದ್ದರು. ಇತ್ತೀಚೆಗೆ ಗುಪ್ತಮಾರಿಯಂತೆ ಎರಗಿದ್ದ ಕ್ಯಾನ್ಸರ್​ಗೆ ತುತ್ತಾದರು. ಕ್ಯಾನ್ಸರ್​​ನಿಂದ ಬಳಲುತ್ತಿದ್ದ ಅನಂತ್​​ಕುಮಾರ್​ ಅವರು ಲಂಡನ್​​ನಲ್ಲಿ ಚಿಕಿತ್ಸೆ ಪಡೆದು ತಾಯಿನಾಡು ಕರ್ನಾಟಕಕ್ಕೆ ಮರಳಿ ಬಂದಿದ್ದರು. ಆದರೆ, ಮರಳಿ ಬಂದ ಅನಂತ್​ಕುಮಾರ್​​ ಮತ್ತೆ ಮೊದಲಿನಂತೆ ಗುಣಮುಖರಾಗಲಿಲ್ಲ ಎಂಬುದು ವಿಷಾದನೀಯ.ಅನಂತ’ ರಾಜಕೀಯ ಬೆಳವಣಿಗೆ:ಅನಂತ್​​ಕುಮಾರ್​ ಅವರು 1987ರಲ್ಲಿ ಬಿಜೆಪಿ ಸೇರಿ, ಕರ್ನಾಟಕ ಭಾರತೀಯ ಜನತಾ ಯುವ ಮೋರ್ಚಾದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು. ಬಳಿಕ 1995ರಲ್ಲಿ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಆಯ್ಕೆಯಾದರು. 1996ರಲ್ಲಿ ಮೊದಲ ಬಾರಿಗೆ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿ, ಚೊಚ್ಚಲಬಾರಿಗೆ ಲೋಕಸಭೆ ಪ್ರವೇಶಿಸಿದರು. ಆನಂತರ ನಿರಂತರವಾಗಿ 6 ಬಾರಿ ಆಯ್ಕೆಯಾದರು.

Share News

About Shaikh BIG TV NEWS, Hubballi

Check Also

ಒಂದು ಬೆಕ್ಕಿನ ಗರ್ಭ… ಎರಡು ಮನೆಗಳ ಗಲಾಟೆ! ಕೊನೆಗೆ ಪೊಲೀಸರೇ ‘ವಿಚಿತ್ರ ತೀರ್ಪು’ ಕೊಟ್ಟ ಕಥೆ!

ನಾಲ್ಕು ಮರಿಗಳು ಹುಟ್ಟಿದವು… ಆದರೆ ಕಸ್ಟಡಿ ಯಾರಿಗೆ..? ಪೊಲೀಸರನ್ನೇ ಕಂಗೆಡಿಸಿದ ಪ್ರಕರಣ! ಬೆಕ್ಕು ಗರ್ಭಿಣಿ… ನೆರೆಹೊರೆಯವರ ಗಲಾಟೆ! ಬೆಂಗಳೂರಿನಲ್ಲಿ ‘ವಿಚಿತ್ರ’ …

Leave a Reply

Your email address will not be published. Required fields are marked *