ಬ್ರಹ್ಮಾವರ: ಮನೆಯ ಡ್ರಾವರ್‌ನಲ್ಲಿ ಇರಿಸಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನದ ಕರಿಮಣಿ ಸರ ಕಳವಾಗಿರುವ ಘಟನೆ ಕಾಡೂರು ಗ್ರಾಮದ ತಂತ್ರಾಡಿ ಹೊಸ್ಕೆರೆ ಎಂಬಲ್ಲಿ ನಡೆದಿದೆ. ಮುಂಬೈಯಲ್ಲಿ ವ್ಯವಹಾರ ಮಾಡಿಕೊಂಡಿದ್ದ ಹೊಸ್ಕೆರೆ ನಿವಾಸಿ ಉಮೇಶ್ ಶೆಟ್ಟಿ ಎಂಬವರ ಮನೆಯಲ್ಲಿ ತಾಯಿ ಮತ್ತು ತಂದೆ ಮಾತ್ರ ಇದ್ದು, ತಾಯಿ ಪಾರ್ವತಿ ಎಂಬವರ 4ಲಕ್ಷ ರೂ.ಮೌಲ್ಯದ 38 ಗ್ರಾಂ ತೂಕದ ಚಿನ್ನದ ಕರಿಮಣಿ ಸರವನ್ನು ಫೆ.16ರಂದು ಮನೆಯ ಕೋಣೆಯ ಡ್ರಾವರ್‌ನಲ್ಲಿ ಇಟ್ಟಿದ್ದರು. ಪಾರ್ವತಿ ಎ.23ರಂದು ಮೃತಪಟ್ಟಿದ್ದು, ಮುಂಬಯಿಂದ ಬಂದ ಉಮೇಶ್ ಶೆಟ್ಟಿ, ತಾಯಿ ಅಂತ್ಯಸಂಸ್ಕಾರದ ಕಾರ್ಯ ಮುಗಿಸಿ ಮೇ 1ರಂದು ಸಂಜೆ ಕೋಣೆಯ ಡ್ರಾವರ್ ನೋಡಿದಾಗ ಅದರಲ್ಲಿಟ್ಟಿದ್ದ ಚಿನ್ನದ ಕರಿಮಣಿ ಕಳವು ಆಗಿರುವುದು ಕಂಡುಬಂದಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

