Breaking News

ಕೊಳೆತ ಸ್ಥಿತಿಯಲ್ಲಿದ್ದ ಶವ ಪತ್ತೆ; 10-15 ದಿನ ಹಿಂದೆಯೇ ಕೊಲೆಯಾಗಿರುವ ಶಂಕೆ

ಕನಕಗಿರಿ: ಪಟ್ಟಣದ ನಿರ್ಮಾಣ ಹಂತದಲ್ಲಿನ ಮನೆಯಲ್ಲಿ ಮಹಿಳೆಯನ್ನು ಹತ್ಯೆ ಮಾಡಿ ಸಾಕ್ಷಿ ನಾಶಕ್ಕಾಗಿ ಸುಟ್ಟು ಹಾಕಿರುವ ಘಟನೆ ಮಾಸುವ ಮುನ್ನವೇ ಅದೇ ಮಾದರಿಯಲ್ಲಿ ಯುವಕನನ್ನು ಹತ್ಯೆ ಮಾಡಿ ಸುಟ್ಟು ಹಾಕಿರುವ ಘಟನೆ ತಾಲೂಕಿನ ಚರ್ಚನಗುಡ್ಡ ತಾಂಡಾದ ಗುಡ್ಡದ ಪ್ರದೇಶದಲ್ಲಿ 10,15 ದಿನಗಳ ಹಿಂದೆಯೇ ನಡೆದಿದ್ದು, ತಡವಾಗಿ (ಜು.5) ಬೆಳಕಿಗೆ ಬಂದಿದೆ. ಚರ್ಚನಗುಡ್ಡ ತಾಂಡಾದ ಸರ್ವೆ ನಂ.26ರ ಜಮೀನಿನ ಬಳಿ ಗುಡ್ಡವಿದ್ದು, ಜು.4ರ ಶನಿವಾರ ಸಂಜೆ ಜಮೀನಿಗೆ ತೆರಳಿದ್ದ ರೈತ ಶಂಕ್ರಪ್ಪನಿಗೆ ಜಮೀನಿನ ಪಕ್ಕದಲ್ಲಿನ ಗುಡ್ಡದಲ್ಲಿ ಸಂಪೂರ್ಣವಾಗಿ ಸುಟ್ಟಿದ್ದ ಪಶುಪಕ್ಷಿಗಳು ತಿಂದು ಕೊಳೆತ ಸ್ಥಿತಿಯಲ್ಲಿದ್ದ ವ್ಯಕ್ತಿಯ ಶವ ಕಂಡು ಬಂದಿದೆ. ಕೂಡಲೇ ಸಂಬಂಧಿಕರಿಗೆ ಮಾಹಿತಿ ಹಾಗೂ ಪೊಲೀಸರಿಗೂ ಸುದ್ದಿ ತಲುಪಿದ್ದು, ಪಿಐ ವಿ. ನಾರಾಯಣ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ತಡರಾತ್ರಿಯೇ ಡಿವೈಎಸ್‌ಪಿ, ಎಸ್‌ಪಿ ಕೃತ್ಯದ ಸ್ಥಳಕ್ಕೆ ತೆರಳಿ ಮಾಹಿತಿ ಪಡೆದುಕೊಂಡಿದ್ದಾರೆ. 10-15 ದಿನಗಳ ಹಿಂದೆಯೇ ನಡೆದಿರುವ ಘಟನೆಯಾಗಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಕೊಲೆಯಾದ ವ್ಯಕ್ತಿ 20-25ನೇ ವಯಸ್ಸಿನವನಾಗಿದ್ದು, ಗುರುತು, ಕೊಲೆಗೆ ಕಾರಣ, ಆರೋಪಿಗಳು ಪತ್ತೆಯಾಗಿಲ್ಲ. ಶವ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿದ್ದು, ವಿಧಿ ವಿಜ್ಞಾನ ಪ್ರಯೋಗಕ್ಕಾಗಿ ಸೋಕೋ ತಂಡ ದೇಹದ ಅಂಗಾಂಗವನ್ನು ಸಂಗ್ರಹಿಸಿದೆ. ಶ್ವಾನ ದಳದಿಂದ ಕೊಲೆಗಾರರ ಕುರುಹುವನ್ನು ಪತ್ತೆ ಹಚ್ಚಲು ಪೊಲೀಸರು ಮುಂದಾಗಿದ್ದಾರೆ.

Share News

About BigTv News

Check Also

ಇ-ಖಾತೆಗಾಗಿ ₹50 ಸಾವಿರ ಲಂಚಕ್ಕೆ ಬೇಡಿಕೆ; ಮೊದಲ ಕಂತು ಪಡೆಯುವಾಗ ನಗರಸಭೆ ಸಿಬ್ಬಂದಿ ಲೋಕಾಯುಕ್ತ ಬಲೆಗೆ

ಶಿಡ್ಲಘಟ್ಟ: ಇ-ಖಾತೆ ಮಾಡಿಕೊಡಲು ₹50 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು, ಮೊದಲ ಕಂತಿನ ₹25,500 ಸ್ವೀಕರಿಸುತ್ತಿದ್ದ ನಗರಸಭೆಯ ಎಸ್‌ಡಿಎ ನಾಗರಾಜ್ …

Leave a Reply

Your email address will not be published. Required fields are marked *