ಮಹಾರಾಷ್ಟ್ರ: ₹11.48 ಕೋಟಿ ಮೌಲ್ಯದ ಬೃಹತ್ ಸಿಂಥೆಟಿಕ್ ಹಾಲಿನ ದಂಧೆಯನ್ನು ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ (FDA) ಹಾಗೂ ಪೊಲೀಸರು ಭೇದಿಸಿದ್ದು, ಇದುವರೆಗೆ 13 ಆರೋಪಿಗಳನ್ನು ಬಂಧಿಸಿದ್ದಾರೆ. ಪುಣೆ, ಅಹಲ್ಯಾನಗರ, ಸೋಲಾಪುರ, ಜಲ್ನಾ ಮತ್ತು ಥಾಣೆ ಸೇರಿದಂತೆ 13 ಸ್ಥಳಗಳಲ್ಲಿ ದಾಳಿ ನಡೆಸಿದ ಅಧಿಕಾರಿಗಳು ಸುಮಾರು 20,000 ಲೀಟರ್ ಶಂಕಿತ ನಕಲಿ ಹಾಲು, ಕಲಬೆರಕೆ ರಾಸಾಯನಿಕಗಳು ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಐದು ಆಹಾರ ಪರವಾನಗಿಗಳನ್ನು ಅಮಾನತುಗೊಳಿಸಿ, ನಾಲ್ಕು ಘಟಕಗಳನ್ನು ಮುಚ್ಚಲಾಗಿದೆ. ತನಿಖೆಯ ಪ್ರಕಾರ, ಡಿಟರ್ಜೆಂಟ್, ಶಾಂಪೂ, ಪಾಮ್ ಎಣ್ಣೆ, ಹಾಲಿನ ಪುಡಿ ಹಾಗೂ ಇತರ ರಾಸಾಯನಿಕಗಳನ್ನು ಬೆರೆಸಿ ನಕಲಿ ಹಾಲು ತಯಾರಿಸಿ, ಬಳಿಕ ಅದನ್ನು ನಿಜವಾದ ಹಾಲಿನೊಂದಿಗೆ ಮಿಶ್ರಣ ಮಾಡಿ ಮಾರುಕಟ್ಟೆಗೆ ಪೂರೈಸಲಾಗುತ್ತಿತ್ತು. ಪ್ರಕರಣಕ್ಕೆ ಸಂಬಂಧಿಸಿ 26 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಉಳಿದ ಆರೋಪಿಗಳ ಪತ್ತೆಗೆ ತನಿಖೆ ಮುಂದುವರಿದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

