Breaking News

ಚಾಲಕನಿಂದ ಲಂಚ ಪಡೆದ ಆರೋಪ: ಕಾನ್‌ಸ್ಟೇಬಲ್‌ ಅಮಾನತು

ಬೆಂಗಳೂರು: ವಾಹನ ಚಾಲಕರಿಂದ ₹5 ಸಾವಿರ ಲಂಚ ಪಡೆದ ಆರೋಪದ ಮೇಲೆ ಪುಲಕೇಶಿನಗರ ಸಂಚಾರ ಪೊಲೀಸ್ ಠಾಣೆಯ ಕಾನ್‌ಸ್ಟೇಬಲ್ ಸೋಮಶೇಖರ್ ಅವರನ್ನು ಬೆಂಗಳೂರು ಪೂರ್ವ ವಿಭಾಗದ ಟ್ರಾಫಿಕ್ ಡಿಸಿಪಿ ಸಾಹಿಲ್ ಬಾಗ್ಲಾ ಅಮಾನತುಗೊಳಿಸಿದ್ದಾರೆ. ಜುಲೈ 18ರಂದು ಸೆಂಟ್ ಜಾನ್ಸ್ ಮುಖ್ಯರಸ್ತೆಯಲ್ಲಿ ಕಬ್ಬಿಣದ ಲೋಡ್ ಸಾಗಿಸುತ್ತಿದ್ದ ವಾಹನದ ವಿರುದ್ಧ ಬಿಎನ್‌ಎಸ್ 285ರಡಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ನ್ಯಾಯಾಲಯದಲ್ಲೇ ದಂಡ ಪಾವತಿಸಬೇಕಿದ್ದರೂ, ವಾಹನ ಬಿಡಿಸುವುದಾಗಿ ಹೇಳಿ ಚಾಲಕನಿಂದ ₹5 ಸಾವಿರ ಲಂಚ ಪಡೆದಿದ್ದಾರೆ ಎನ್ನಲಾಗಿದೆ. ಹಣ ನೀಡುವ ದೃಶ್ಯವನ್ನು ಚಾಲಕ ಮೊಬೈಲ್‌ನಲ್ಲಿ ದಾಖಲಿಸಿಕೊಂಡಿದ್ದು, ಬಳಿಕ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದರು. ವಿಡಿಯೊ ಸಾಕ್ಷ್ಯ ಪರಿಶೀಲಿಸಿದ ಡಿಸಿಪಿ ಸಾಹಿಲ್ ಬಾಗ್ಲಾ ಅವರು ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ ಕಾನ್‌ಸ್ಟೇಬಲ್ ಸೋಮಶೇಖರ್ ಅವರನ್ನು ತಕ್ಷಣದಿಂದ ಅಮಾನತುಗೊಳಿಸಿ ಆದೇಶಿಸಿದ್ದಾರೆ.

Share News

About BigTv News

Check Also

ಇಬ್ಬರ ಜಗಳ ಬಿಡಿಸಲು ಹೋದ ಯುವಕನ ಕತ್ತು ಸೀಳಿ ಭೀಕರ ಕೊಲೆ!

ಮಂಡ್ಯ: ಹಣಕಾಸಿನ ವಿಚಾರವಾಗಿ ನಡೆಯುತ್ತಿದ್ದ ಗಲಾಟೆಯನ್ನು ಬಿಡಿಸಲು ಹೋದ 25 ವರ್ಷದ ನಂದನ್ ಎಂಬ ಯುವಕನನ್ನು ಡ್ರ್ಯಾಗರ್‌ನಿಂದ ಕತ್ತು ಸೀಳಿ …

Leave a Reply

Your email address will not be published. Required fields are marked *