Breaking News

ಹುಬ್ಬಳ್ಳಿ ಶಹರ ತಾಲೂಕು ಮಟ್ಟದ ಚೇಸ್ ಟೋರ್ನಿ

ಹುಬ್ಬಳ್ಳಿ: ನಗರದ ಶಾಂತಿ ಕಾಲೋನಿಯಲ್ಲಿನ ಎನ್. ಕೆ. ಟಕ್ಕರ್ ಇಂಗ್ಲಿಷ್ ಮೀಡಿಯ ಶಾಲೆಯಲ್ಲಿ ಹುಬ್ಬಳ್ಳಿ ಶಹರ ತಾಲೂಕು ಮಟ್ಟದ 14 ಮತ್ತು 17 ವಯಸ್ಸಿನ ಒಳಗಿನ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟ ದಂಗವಾಗಿ ಚೇಸ್ ಪಂದ್ಯಾವಳಿ ಜರುಗಿತು.

ಹಿರಿಯ ಪ್ರಾಥಮಿಕ ಶಾಲೆಯ ಬಾಲಕರ ವಿಭಾಗದಲ್ಲಿ ವಿಭಾಗದಲ್ಲಿ ವಿ.ಎಸ್ ಪಿಳ್ಳೈ ಇಂಗ್ಲಿಷ್ ಮಿಡಿಯಂ ಶಾಲೆಯ ವಿದ್ಯಾರ್ಥಿಗಳಾದ ಶ್ರೇಯಸ್ ಕಲ್ಮೇಶ ಮಂಡ್ಯಾಳ ಪ್ರಥಮ, ದ್ವೀತಿಯ ಸಂಕಲ್ಪ ಬಾಗಲೇ, ತೃತೀಯ ಶಿವಕುಮಾರ್, ಚತುರ್ಥ ಕುಶಾಲ ಹಾಗೂ ಐದನೇ ತನ್ಮಯ ಅದೇ ರೀತಿ ಬಾಲಕಿಯರ ವಿಭಾಗದಲ್ಲಿ ಶ್ರೇಯಾ ರತನ್ ಪ್ರಥಮ, ದ್ವೀತಿಯ ಅಮೃತಾ ಹಿರೇಮಠ, ಮೇಘಾ ಮಡಿವಾಳರ ತೃತೀಯ, ರಕ್ಣಿತಾ ನಾಲ್ಕನೇ ಹಾಗೂ ಐದನೇ ಸ್ಥಾನವನ್ನು ಪೂರ್ವಾ ಕುಸುಬಾಪುರ ತಮ್ಮದಾಗಿಸಿಕೊಂಡರು.

ಹೈಸ್ಕೂಲ್ ನ ಬಾಲಕರ ವಿಭಾಗದಲ್ಲಿ ರಾಹುಲ್, ಪ್ರಥಮ, ಸಚಿನ್ , ಮೂರನೇ ಶೇತ್ವಾಲ್, ನಾಲ್ಕನೇ ಅಖಲೇಶ್ ಹಾಗೂ ಐದನೇ ಸ್ಥಾನದಲ್ಲಿ ಆದಿತ್ಯ ಮಂಡ್ಯಾಳ
ಸ್ಥಾನ ಪಡೆದರು.

ಬಾಲಕಿಯರ ವಿಭಾಗದಲ್ಲಿ ಪ್ರಥಮ
ಕ್ಷಿತಿಜಾ ಪರಾಟ್, ದ್ವೀತಿಯ ಸುಪ್ರಿಯಾ, ನಾಲ್ಕನೇ ವೈಷ್ಣವಿ ಹಾಗೂ ಐದನೇ ಸ್ಥಾನದಲ್ಲಿ
ಸೃಷ್ಟಿ ಗೆಲುವು ಸಾಧಿಸಿದರು. ಈ ಎಲ್ಲ ವಿಜಯಶಾಲಿಗಳು ನಗರದ ಶ್ರೀಮತಿ ಎನ್ ‌.ಕೆ.ಟಕ್ಕರ್ ಹೈಸ್ಕೂಲ್ ನಲ್ಲಿ ಇದೇ ಆಗಷ್ಟ್ 18 ರಂದು ನಡೆಯಲಿರುವ
ಜಿಲ್ಲಾ ಮಟ್ಟದ ಪಂದ್ಯಾವಳಿಗೆ
ಆಯ್ಕೆಯಾದರು. ‌

ಬಾಲಕ ಹಾಗೂ ಬಾಲಕಿಯರ ಚೇಸ್ ಪಂದ್ಯಾವಳಿಯಲ್ಲಿ ಒಟ್ಟು 15 ಶಾಲೆಗಳ ಸ್ಪರ್ಧೆಯಲ್ಲಿ ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ 65 ಹಾಗೂ ಹೈಸ್ಕೂಲ್ ವಿಭಾಗದಲ್ಲಿ 80 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಪಂದ್ಯಾವಳಿ ಉದ್ಘಾಟನೆ
ಪಂದ್ಯಾವಳಿ ಆರಂಭಕ್ಕೂ ಮುನ್ನ ಶಾಂತಿ ಕಾಲೋನಿಯಲ್ಲಿನ ಎನ್ ಕೆ.
ಟಕ್ಕರ್ ಪ್ರೌಢಶಾಲೆ ಯಲ್ಲಿ ಸ್ಪರ್ಧೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಂ.ಎಸ್. ಶಿವಳ್ಳಿಮಠ ಉದ್ಘಾಟನೆ ಮಾಡಿದರು. ಎನ್ ಕೆ.ಟಕ್ಕರ್ ಸಂಸ್ಥೆಯ ಸಿಇಓ ಈಶ್ವರಲಾಲ್ ಲದ್ದಡ್ ಅಧ್ಯಕ್ಷತೆ ವಹಿಸಿದ್ದರು .‌ ಎನ್ ಕೆ.ಠಕ್ಕರ್ ಇಂಗ್ಲಿಷ್ ಶಾಲೆಯ ದೈಹಿಕ ಶಿಕ್ಷಕರಾದ ಮಡಿವಾಳೇಶ ಅಸೀಬಾಗಿಲ ಅವರ ಪಂದ್ಯಾವಳಿಯ ಉಸ್ತುವಾರಿಯಲ್ಲಿ ನಡೆಯಿತು.ಎಸ್. ಬಿ. ಹಿರೇಮಠ, ಶಾಹಿನ್ ಬೇಗಮ್ಲ ಲಯಮ್ಸ್ ಇಂಗ್ಲಿಷ್ ಮಿಡಿಯಂ ಶಾಲೆಯ ಶಿಕ್ಷಕಿ ಕಾಂಚನಾ ಕುಂದಗೋಳ, ವಿ.ಎಸ್ ಪಿಳ್ಳೈ ಇಂಗ್ಲಿಷ್ ಮಿಡಿಯಂ ಶಾಲೆಯ ಶಿಕ್ಷಕರಾದ ಎಚ್ ‌ಎಂ ನಾಗರಾಜ, ವಿನಾಯಕ ಉರಣಕರ್, ರಾಜಶೇಖರ ತುರಮರಿ ನಿರ್ಣಾಯಕರಾಗಿ ಇತರ ಶಾಲೆಯ ದೈಹಿಕ ಶಿಕ್ಷಕರು
ಆಗಮಿಸಿದ್ದರು. ವಿಜೇತ ಸ್ಪರ್ಧಾಳುಗಳಿಗೆ ವಿ.ಎಸ್ ಪಿಳ್ಳೈ ಇಂಗ್ಲಿಷ್ ಮಿಡಿಯಂ ಶಾಲೆ, ಲಯನ್ಸ್ ಇಂಗ್ಲಿಷ್ ಮಿಡಿಯಂ ಶಾಲೆಯ ಆಡಳಿತ ಮಂಡಳಿ ಪದಾಧಿಕಾರಿಗಳು, ಶಿಕ್ಷಕರು, ಸಿಬ್ಬಂದಿ ವರ್ಗ ಮುಂತಾದವರು ಅಭಿನಂದನೆ ಸಲ್ಲಿಸಿದ್ದಾರೆ.

Share News

About BigTv News

Check Also

ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಅಪಹರಿಸಿ ವ್ಯಕ್ತಿ ಹತ್ಯೆ

ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಉಲ್ಬಣಗೊಂಡಿದ್ದು ಮೈತೇಯಿ ಸಮುದಾಯಕ್ಕೆ ಸೇರಿದ ವ್ಯಕ್ತಿಯನ್ನು ಶಂಕಿತ ಕುಕಿ ಸಮುದಾಯದ ಬಂಡುಕೋರರು ಅಪಹರಿಸಿ ಗುಂಡಿಕ್ಕಿ ಹತ್ಯೆ …

Leave a Reply

Your email address will not be published. Required fields are marked *