ಬೆಂಗಳೂರು: ದುಷ್ಟಶಕ್ತಿ ನಿವಾರಣೆ ಹೆಸರಿನಲ್ಲಿ ಪೂಜೆ ಮಾಡುವುದಾಗಿ ನಂಬಿಸಿ ಮಹಿಳೆಯೊಬ್ಬರಿಗೆ ₹2.5 ಕೋಟಿ ವಂಚನೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಹಣ ಹೂಡಿದರೆ ₹10 ಕೋಟಿ ನೀಡುವುದಾಗಿ ಆಮಿಷ ಒಡ್ಡಿ ವಂಚಕರು ಮೋಸ ಮಾಡಿದ್ದಾರೆ. ಬೈಕ್ ಅಪಘಾತದಲ್ಲಿ ಮಗ ಗಾಯಗೊಂಡಿದ್ದನ್ನು ದುಷ್ಟಶಕ್ತಿಯ ಪರಿಣಾಮ ಎಂದು ನಂಬಿಸಿದ ಆರೋಪಿಗಳು, ನಕಲಿ ಬಾಬಾ ಮೂಲಕ ಪೂಜೆ ಮಾಡಿಸಿ ಮೊದಲು ₹8 ಲಕ್ಷ ಪಡೆದು, ಬಳಿಕ ಮಹಿಳೆಯಿಂದ ₹2.5 ಕೋಟಿ ಹಣ ಪಡೆದಿದ್ದಾರೆ. ಹಣ ವಾಪಸ್ ಕೇಳಿದಾಗ ಕೊಲೆ ಬೆದರಿಕೆ ಹಾಕಿರುವುದಾಗಿ ಮಹಿಳೆ ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದಾರೆ. ನಕಲಿ ಬಾಬಾ ಅಪ್ಸರ್ ಪಾಷಾ ಹಾಗೂ ಮಧ್ಯವರ್ತಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

