Breaking News

ಕೈಯಲ್ಲಿ ಗನ್ ಹಿಡಿದು ರೀಲ್ಸ್ ಮಾಡಿದ ಯುವತಿ! ಠಾಣೆಗೆ ಕರೆಸಿ ಪೊಲೀಸರಿಂದ ಖಡಕ್ ವಾರ್ನಿಂಗ್

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಕೈಯಲ್ಲಿ ಗನ್ ಹಿಡಿದು ವಿಡಿಯೋ ವೈರಲ್ ಮಾಡಿದ ಯುವತಿ ಅಲಿಶಾ ಅನ್ಸಾರಿಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಗನ್ ಪ್ರದರ್ಶನ ಹಾಗೂ ಬೈಕ್ ಸ್ಟಂಟ್ ವಿಡಿಯೋಗಳಿಂದ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ ಆರೋಪದಡಿ ಕ್ರಮ ಕೈಗೊಳ್ಳಲಾಗಿದೆ. ಇನ್‌ಸ್ಟಾಗ್ರಾಂನಲ್ಲಿ ಗನ್ ಹಿಡಿದ ವಿಡಿಯೋ ಹಾಗೂ ನಕಾರಾತ್ಮಕ ಕಾಮೆಂಟ್‌ಗಳಿಗೆ ಪ್ರತಿಯಾಗಿ ಮತ್ತೊಂದು ಬೆದರಿಕೆ ರೀತಿಯ ವಿಡಿಯೋ ಪೋಸ್ಟ್ ಮಾಡಿದ್ದಳು. ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್‌ನಲ್ಲಿ ಬೈಕ್ ಸ್ಟಂಟ್ ಮಾಡಿದ ವಿಡಿಯೋ ಕೂಡ ವೈರಲ್ ಆಗಿತ್ತು. ಸುಧ್ಗುಂಟೆಪಾಳ್ಯ ಪೊಲೀಸರು ಯುವತಿಯನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿ, ಬಿಎನ್‌ಎಸ್‌ಎಸ್‌ ಸೆಕ್ಷನ್ 126 ಅಡಿಯಲ್ಲಿ ಬೌಂಡ್ ಓವರ್ ಮಾಡಿ ಎಚ್ಚರಿಕೆ ನೀಡಿ, ಇಂತಹ ವಿಡಿಯೋಗಳನ್ನು ಮತ್ತೆ ಅಪ್ಲೋಡ್ ಮಾಡದಂತೆ ಸೂಚಿಸಿದ್ದಾರೆ.

Share News

About BigTv News

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *