ಭದ್ರಾವತಿಯ ಜನ್ನಾಪುರದ ಮಲ್ಲೇಶ್ವರ ಸಭಾಭವನದಲ್ಲಿ ನಡೆದ ಎಸ್. ಜಾನಕಿ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಪೊಲೀಸ್ ಸಿಬ್ಬಂದಿ ಉಮೇಶ್ ಮೇಲೆ ಹಲ್ಲೆ ನಡೆದಿರುವ ಆರೋಪ ಕೇಳಿಬಂದಿದೆ. ಕಾರ್ಯಕ್ರಮದಲ್ಲಿ ಶಾಸಕರ ಮಗ ಗಣೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದ ವೇಳೆ, ಉಮೇಶ್ ಅವರನ್ನು ವೇದಿಕೆಗೆ ಆಹ್ವಾನಿಸಲಾಯಿತು. ಆದರೆ, “ನಾನು ಭ್ರಷ್ಟರ ಜೊತೆ ಒಂದೇ ವೇದಿಕೆಯಲ್ಲಿ ಕೂರುವುದಿಲ್ಲ” ಎಂದು ಉಮೇಶ್ ಆಹ್ವಾನ ನಿರಾಕರಿಸಿದ್ದರಿಂದ ವಾಗ್ವಾದ ಉಂಟಾಗಿದೆ ಎನ್ನಲಾಗಿದೆ. ಬಳಿಕ ಶಾಸಕರ ಬೆಂಬಲಿಗರು ಉಮೇಶ್ ಹಾಗೂ ಅವರ ಸಂಬಂಧಿ ಸುಹಾಸ್ ಮೇಲೆ ಸಾರ್ವಜನಿಕವಾಗಿಯೇ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಘಟನೆ ಸಂಬಂಧ ಸಂತ್ರಸ್ತರು ಭದ್ರಾವತಿ ನ್ಯೂ ಟೌನ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಪ್ರಕರಣ ಸ್ಥಳೀಯವಾಗಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

