ಧಾರವಾಡ: ಹುಬ್ಬಳ್ಳಿ, ಧಾರವಾಡ ಅವಳಿನಗರದ ವಿಶೇಷ ಯೋಜನೆಯಾದ 2025ಕ್ಕೆ ಪ್ರತಿ ಮನೆಗೂ 24X7 ನೀರು ಸರಬರಾಜು ಮಾಡುವ ವ್ಯವಸ್ಥೆ ಕುರಿತು, ಶುಕ್ರವಾರ ಧಾರವಾಡದ ವಾರ್ಡ್ ಸಂಖ್ಯೆ 3ಕ್ಕೆ ವಿಶ್ವಬ್ಯಾಂಕ್ ತಂಡದ ಅಧಿಕಾರಿಗಳು ಭೇಟಿ ನೀಡಿ ಸಂಪೂರ್ಣ ಮಾಹಿತಿ ಪಡೆಯುವುದರ ಜೊತೆಗೆ ಸಾರ್ವಜನಿಕರೊಂದಿಗೆ ಸಂವಾದ ಮಾಡಿ ಅಹವಾಲುಗಳನ್ನು ಆಲಿಸಿದರು.
ಸಾರ್ವಜನಿಕರು ಪ್ರಸ್ತುತ ಜಾರಿಯಲ್ಲಿರುವ 24X7 ನೀರಿನ ಯೋಜನೆ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಈಗಾಗಲೇ ವಾರ್ಡನಲ್ಲಿ ಶೇ.90 ರಷ್ಟು ಕಾರ್ಯ ಮುಕ್ತಾಯವಾಗಿದ್ದು, ಇನ್ನುಳಿದ ಕಾಮಗಾರಿಯನ್ನು ಶೀಘ್ರಗತಿಯಲ್ಲಿ ಮಾಡಲು ನಿರ್ದೇಶನ ನೀಡಲಾಯಿತು.
ಮಹಾತ್ಮ ಬಸವೇಶ್ವರನಗರ, ಮರಾಠಾ ಕಾಲೊನಿ ಭಾಗದಲ್ಲಿ ಅಧಿಕಾರಿಗಳು ಭೇಟಿ ನೀಡಿ ಕಾಮಗಾರಿಯ ಬಗ್ಗೆ ಸಂಪೂರ್ಣ ಮಾಹಿತಿ ಕಲೆಹಾಕಿದರು. ಈ ಸಂದರ್ಭದಲ್ಲಿ ಮೇಯರ್ ಈರೇಶ ಅಂಚಟಗೇರಿ, ವಿಶ್ವಬ್ಯಾಂಕ್ ಯೋಜನಾಧಿಕಾರಿ ಮೋಹನರಾವ್ ಅಸ್ಲಮ್ ಪಾಷಾ, ಎಲ್ ಆ್ಯಂಡ್ ಟಿ ಅಧಿಕಾರಿಗಳು ಈ ಸಂದರ್ಭದಲ್ಲಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

