ಚಿಕ್ಕೋಡಿ ತಾಲೂಕಿನ ಖಡಕಲಾಟ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನೇ ಹತ್ಯೆಗೈದು, ಆತ ಬೇರೆ ಜಿಲ್ಲೆಗೆ ಕುರಿ ಕಾಯಲು ತೆರಳಿದ್ದಾನೆ ಎಂದು ಕಟ್ಟುಕಥೆ ಕಟ್ಟಿದ್ದ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ. ಖಡಕಲಾಟ ಗ್ರಾಮದ ಕುರಿಗಾಹಿ ರಾಘು ಗಾವಡೆ (40) ಕೊಲೆಯಾದವರು. ರಾಘು ಅವರ ಪತ್ನಿ ಬಂಗಾರಿ, ಪತಿಯ ಸಹೋದರ ಸಂಬಂಧಿ ರಾಮಾ ರಾಣ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಈ ವಿಚಾರ ತಿಳಿದು ರಾಘು ವಿರೋಧಿಸಿದ್ದರಿಂದ, ಇಬ್ಬರೂ ಸೇರಿ ಆತನನ್ನು ಹತ್ಯೆಗೈದು ಶವವನ್ನು ಹೊಲದಲ್ಲಿ ಹೂತುಹಾಕಿದ್ದರು ಎಂದು ಆರೋಪಿಸಲಾಗಿದೆ. ರಾಘು ಕಾಣೆಯಾಗಿದ್ದ ವೇಳೆ ಆತ ಕುರಿ ಕಾಯಲು ಬೇರೆ ಜಿಲ್ಲೆಗೆ ತೆರಳಿದ್ದಾನೆ ಎಂದು ಬಂಗಾರಿ ಕುಟುಂಬಸ್ಥರನ್ನು ನಂಬಿಸಿದ್ದಳು. ಆರು ತಿಂಗಳಾದರೂ ಮನೆಗೆ ಬಾರದ ಹಿನ್ನೆಲೆಯಲ್ಲಿ ಅನುಮಾನಗೊಂಡ ಕುಟುಂಬಸ್ಥರು ವಿಚಾರಿಸಿದಾಗ ಸತ್ಯ ಬಯಲಾಗಿದೆ. ಬಳಿಕ ದೂರು ದಾಖಲಿಸಿಕೊಂಡ ಪೊಲೀಸರು ಬಂಗಾರಿ ಹಾಗೂ ರಾಮಾ ರಾಣನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

