Breaking News

ಉದ್ಯಮಿಗೆ 18.41 ಕೋಟಿ ರೂ. ವಂಚನೆ; ಪ್ರಕರಣ ದಾಖಲು

ಬೆಂಗಳೂರು: ಸಹಕಾರ ಬ್ಯಾಂಕ್ ವ್ಯವಸ್ಥಾಪಕ ಹಾಗೂ ಸಹಚರರು ಉದ್ಯಮಿಗೆ ₹18.41 ಕೋಟಿ ವಂಚಿಸಿರುವ ಆರೋಪ ಕೇಳಿಬಂದಿದ್ದು, ಸಿಸಿಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬನಶಂಕರಿಯ ಸಹಕಾರ ಬ್ಯಾಂಕ್‌ನಲ್ಲಿ ಉದ್ಯಮಿ ನವೀನ್ 7 ಚಾಲ್ತಿ ಖಾತೆ ಹೊಂದಿದ್ದರು. ವ್ಯವಸ್ಥಾಪಕ ವಿ. ಕೃಷ್ಣಮೂರ್ತಿ ಅವರು TOD ಸಾಲ ನೀಡುವುದಾಗಿ ಹೇಳಿ, ತಾವು ಸೂಚಿಸಿದ ಖಾತೆಗಳಿಗೆ ಹಣ ವರ್ಗಾಯಿಸುವಂತೆ ತಿಳಿಸಿದ್ದರು ಎನ್ನಲಾಗಿದೆ. ಆಸ್ತಿ ದಾಖಲೆಗಳನ್ನು ಅಡಮಾನ ಇರಿಸಿಕೊಂಡು ಬಡ್ಡಿ ಕಟ್ಟಿಸಿಕೊಂಡರೂ ಸಾಲದ ಹಣ ಬಳಸಲು ಅವಕಾಶ ನೀಡಿಲ್ಲ ಎಂದು ನವೀನ್ ಆರೋಪಿಸಿದ್ದಾರೆ. ಕೃಷ್ಣಮೂರ್ತಿ, ಹರೀಶ್, ಸಚಿನ್ ಹಾಗೂ ಕೆಲ ಸೌಹಾರ್ದ ಬ್ಯಾಂಕ್ ಅಧಿಕಾರಿಗಳು ಸೇರಿ ವಂಚನೆ ನಡೆಸಿದ್ದಾರೆ ಎಂದು ನವೀನ್ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಸಿಸಿಬಿ ಪೊಲೀಸರು ಆರೋಪಿಗಳಿಗೆ ನೋಟಿಸ್ ನೀಡಿದ್ದಾರೆ.

Share News

About BigTv News

Check Also

ಯುವತಿ ಕುತ್ತಿಗೆಗೆ ಚಾಕು ಇಟ್ಟು ಸರ ದರೋಡೆ ಯತ್ನ: ಕಿಡಿಗೇಡಿ ಬಂಧನ

ಬೆಂಗಳೂರು: ಇಂದಿರಾನಗರದ ಅಂಗಡಿಯೊಂದಕ್ಕೆ ನುಗ್ಗಿ ಯುವತಿಯ ಕುತ್ತಿಗೆಗೆ ಚಾಕು ಇಟ್ಟು ಚಿನ್ನದ ಸರ ದರೋಡೆಗೆ ಯತ್ನಿಸಿದ ಪ್ರಭುರಾಜ್ (40) ಎಂಬಾತನನ್ನು …

Leave a Reply

Your email address will not be published. Required fields are marked *