ಹು-ಧಾ ಅವಳಿನಗರದಲ್ಲಿ ಇಸ್ಕಾನ್ ವತಿಯಿಂದ ಶ್ರೀ ಕೃಷ್ಣ ಬಲರಾಮ ರಥಯಾತ್ರೆಯನ್ನು ಫೆಬ್ರವರಿ ೧೧ ರಂದು ನಗರದ ನೆಹರೂ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಇಸ್ಕಾನ್ ಅಧ್ಯಕ್ಷ ರಾಜೀವ ಲೋಚಸ ದಾಸ್ ಹೇಳಿದರು.ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ

ಮಾತನಾಡಿದ ಅವರು, ಅಂದು ಸಾಯಂಕಾಲ ೪.೩೦ ರಿಂದ ೮.೩೦ ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದ ಅವರು,ಅಂದಿನ ರಥಯಾತ್ರೆಯು ನಗರದ ನೆಹರೂ ಮೈದಾನದಿಂದ ಆರಂಭವಾಗಿ ಲ್ಯಾಮಿಂಗ್ಟನ್ ರಸ್ತೆ, ಅಂಬೇಡ್ಕರ್ ಸರ್ಕಲ್, ಸ್ಟೇಷನ್ ರಸ್ತೆ, ಗಣೇಶ್ ಪೇಟ ಚೌಕ್, ಮರಾಠಾ ಗಲ್ಲಿ, ಕೊಪ್ಪಿಕರ ರಸ್ತೆ ವಿವಿಧ ಸಂಚರಿಸಿ ನಂತರ ನೆಹರೂ ಮೈದಾನದಲ್ಲಿ ಯಾತ್ರೆ ಕೊನೆಗೊಳ್ಳಲಿದೆ ಎಂದರು.ಅಂದಿನ ಸಂಭ್ರಮದ ರಥಯಾತ್ರೆಯಲ್ಲಿ ಶ್ರೀ ಕೃಷ್ಣನ ಭಕ್ತರು ರಾಜ್ಯದ ವಿವಿಧೆಡೆಯಿಂದ ಹು-ಧಾ ಅವಳಿನಗರಕ್ಕೆ ಆಗಮಿಸುತ್ತಿದ್ದಾರೆಂದರು. ಪತ್ರಿಕಾಗೋಷ್ಠಿಯಲ್ಲಿ ಇಸ್ಕಾನ್ ಉಪಾಧ್ಯಕ್ಷ ರಘೋತ್ತಮ ದಾಸ್ ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

