ಬೀದರ್: ಔರಾದ್ ತಾಲೂಕಿನ ವಡಗಾಂವ ಗ್ರಾಮದಲ್ಲಿ ಎರಡು ತಿಂಗಳ ಹಸುಗೂಸು ಓಂಕಾರನ ಶವ ಬಾವಿಯಲ್ಲಿ ಪತ್ತೆಯಾಗಿದ್ದು, ಮಗುವನ್ನು ತಾಯಿಯೇ ಕೊಂದು ಬಾವಿಗೆ ಎಸೆದಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ತಾಯಿ ಸೇರಿದಂತೆ ನಾಲ್ವರನ್ನು ಸಂತಪುರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಕಾವಲಗುಡ್ಡ ಗ್ರಾಮದ ಸಂಜಯ್ ಹಾಗೂ ವಾಣಿಶ್ರೀ ದಂಪತಿಯ ಮಗು ಓಂಕಾರ. ಹೆರಿಗೆಗಾಗಿ ವಡಗಾಂವದಲ್ಲಿರುವ ತವರು ಮನೆಗೆ ಬಂದಿದ್ದ ವಾಣಿಶ್ರೀ ಅವರ ಮಗು ಶನಿವಾರ ರಾತ್ರಿ ನಾಪತ್ತೆಯಾಗಿತ್ತು. ಭಾನುವಾರ ಸಂಜೆ ಗ್ರಾಮದ ಬಾವಿಯಲ್ಲಿ ಮಗುವಿನ ಮೃತದೇಹ ಪತ್ತೆಯಾಗಿತ್ತು. ಮೇಲ್ನೋಟಕ್ಕೆ ತಾಯಿಯೇ ಮಗುವನ್ನು ಕೊಂದು ಬಾವಿಗೆ ಎಸೆದಿರುವ ಶಂಕೆ ವ್ಯಕ್ತವಾಗಿದ್ದು, ವಾಣಿಶ್ರೀ, ಸೋದರ ಮಾವ ಸಂತೋಷ್, ಅಜ್ಜ ಬಸಪ್ಪ ಹಾಗೂ ಅಜ್ಜಿ ರತ್ನಮ್ಮ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಂತಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

