ಆನೇಕಲ್ ತಾಲೂಕಿನ ಸೂರ್ಯನಗರದ SBI ಬ್ಯಾಂಕ್‌ನಲ್ಲಿ ನಡೆದ ಒಂದು ಘಟನೆಯು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಗ್ರಾಹಕರೊಬ್ಬರು ಕನ್ನಡದಲ್ಲಿ ಮಾತನಾಡಲು ಕೋರಿದಾಗ, ಬ್ಯಾಂಕ್ ವ್ಯವಸ್ಥಾಪಕರು ಉದ್ಧಟತನದಿಂದ ವರ್ತಿಸಿ, ‘ನಾನು ಕನ್ನಡ ಮಾತಾಡಲ್ಲ, ಇದು ಭಾರತ, ಹಿಂದಿಯಲ್ಲೇ ಮಾತಾಡುತ್ತೇನೆ,’ ಎಂದು ದರ್ಪದಿಂದ ಕನ್ನಡಿಗರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ.ಸರ್ಜಾಪುರದ ಎಸ್‌ಬಿಐ ಶಾಖೆಗೆ ಭೇಟಿ ನೀಡಿದ ಗ್ರಾಹಕರೊಬ್ಬರು ಕನ್ನಡದಲ್ಲಿ ಸಂವಹನ ನಡೆಸಲು ಕೋರಿದಾಗ, ಬ್ಯಾಂಕ್ ಮ್ಯಾನೇಜರ್ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಮಾತನಾಡಲು ನಿರಾಕರಿಸಿ, ಹಿಂದಿಯನ್ನೇ ಬಳಸುವುದಾಗಿ ಘೋಷಿಸಿದ್ದಾರೆ. ಈ ಉದ್ಧಟತನದ ವರ್ತನೆಯು ಗ್ರಾಹಕರಿಗೆ ಅವಮಾನವನ್ನುಂಟು ಮಾಡಿದ್ದು, ಕನ್ನಡಿಗರ ಸಾಮೂಹಿಕ ಆಕ್ರೋಶಕ್ಕೆ ಕಾರಣವಾಯಿತು.ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ವಿವಿಧ ಸಂಘಟನೆಗಳು ಬ್ಯಾಂಕ್ ಮುಂದೆ ಪ್ರತಿಭಟನೆ ನಡೆಸಿ, ಮ್ಯಾನೇಜರ್‌ನ ಧೋರಣೆಯನ್ನು ಖಂಡಿಸಿವೆ. ಈ ಘಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

