ದಾಖಲೆಗಳ ಹೆಸರಲ್ಲಿ ದುಡ್ಡು ವಸೂಲಿ ಆರೋಪ..! ಟ್ರಾಫಿಕ್ ಪೊಲೀಸರ ವಿರುದ್ಧ ರೈತರು ಪ್ರತಿಭಟನೆಗೆ ಸಜ್ಜು..!
ಹುಬ್ಬಳ್ಳಿ | ರೈತರ ಆಕ್ರೋಶಟ್ರಾಫಿಕ್ ಪೊಲೀಸರ ಕಿರುಕುಳಕ್ಕೆ ಬೇಸತ್ತ ರೈತರು..! ಹೂವಿನ ಗಾಡಿಗಳನ್ನೇ ಅಡ್ಡಗಟ್ಟಿ ಕಿರುಕುಳ ಆರೋಪ – ಪ್ರತಿಭಟನೆಗೆ ರೈತರು ಸಜ್ಜು..!
ಹುಬ್ಬಳ್ಳಿಯಲ್ಲಿ ಟ್ರಾಫಿಕ್ ಪೊಲೀಸರ ವಿರುದ್ಧ ರೈತರಿಂದ ಗಂಭೀರ ಆರೋಪ ಕೇಳಿಬಂದಿದೆ…
ಹೂವಿನ ಗಾಡಿಗಳನ್ನು ಅಡ್ಡಗಟ್ಟಿ ದಿನನಿತ್ಯ ಕಿರುಕುಳ ನೀಡಲಾಗುತ್ತಿದೆ, ಜೊತೆಗೆ ಹಣಕ್ಕೆ ಬೇಡಿಕೆ ಇಟ್ಟು, ಪ್ರಶ್ನಿಸಿದ ರೈತರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ…
ಟೀಂ’ದಾಖಲೆಗಳ ಹೆಸರಿನಲ್ಲಿ ಪ್ರತಿದಿನ ಹಣ ವಸೂಲಿ ಮಾಡಲಾಗುತ್ತಿದೆ ಎಂದು ರೈತರು ಆರೋಪಿಸಿದ್ದು, ಇದರಿಂದ ಬೇಸತ್ತಿರುವ ರೈತರು ಇದೀಗ ಪ್ರತಿಭಟನೆಗೆ ಮುಂದಾಗಿದ್ದಾರೆ… ರೈತರು ದುಡಿದು ತಂದ ಹೂವುಗಳನ್ನು ಮಾರುಕಟ್ಟೆಗೆ ಸಾಗಿಸುವ ಸಂದರ್ಭದಲ್ಲಿ ವಾಹನಗಳನ್ನು ತಡೆದು ಕಿರುಕುಳ ನೀಡಲಾಗುತ್ತಿದೆ ಎಂಬ ಆರೋಪ ಗಂಭೀರ ಚರ್ಚೆಗೆ ಕಾರಣವಾಗಿದೆ…

ಟ್ರಾಫಿಕ್ ನಿಯಂತ್ರಣ ಮಾಡಬೇಕಾದ ಪೊಲೀಸರು ರೈತರನ್ನೇ ಏಕೆ ಟಾರ್ಗೆಟ್ ಮಾಡುತ್ತಿದ್ದಾರೆ..? ಕಾನೂನುಬದ್ಧ ದಂಡವಿದ್ದರೆ ರಸೀದಿ ನೀಡಿ ವಸೂಲಿ ಮಾಡಲಿ; ಹಣಕ್ಕಾಗಿ ಕಿರುಕುಳದ ಆರೋಪಗಳಿದ್ದರೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲಿ ಎಂಬುದು ರೈತರ ಆಗ್ರಹ… ರೈತರ ಆರೋಪಗಳಿಗೆ
ಹುಬ್ಬಳ್ಳಿ-ಧಾರವಾಡ ಪೊಲೀಸ್ ಇಲಾಖೆ ಯಾವ ಉತ್ತರ ನೀಡಲಿದೆ..? ಪ್ರತಿಭಟನೆಗೂ ಮುನ್ನವೇ ಟ್ರಾಫಿಕ್ ಪೊಲೀಸರ ವಿರುದ್ಧ ತನಿಖೆ ನಡೆಯುತ್ತಾ..? ಎಂಬ ಪ್ರಶ್ನೆ ಇದೀಗ ಎದುರಾಗಿದೆ… ಹುಬ್ಬಳ್ಳಿಯಲ್ಲಿ ಟ್ರಾಫಿಕ್ ಪೊಲೀಸರ ವಿರುದ್ಧ ರೈತರ ಆಕ್ರೋಶ..!
ಕಿರುಕುಳಕ್ಕೆ ಬೇಸತ್ತು ಪ್ರತಿಭಟನೆಗೆ ಮುಂದಾದ ರೈತರು..!ಹುಬ್ಬಳ್ಳಿಯಲ್ಲಿ ಟ್ರಾಫಿಕ್ ಪೊಲೀಸರ ವಿರುದ್ಧ ರೈತರು ಗಂಭೀರ ಆರೋಪ ಮಾಡಿದ್ದಾರೆ… ಹೂವಿನ ಗಾಡಿಗಳನ್ನು ಅಡ್ಡಗಟ್ಟಿ ತಪಾಸಣೆ… ದಾಖಲೆಗಳ ಹೆಸರಿನಲ್ಲಿ ಹಣಕ್ಕೆ ಬೇಡಿಕೆ…
ಪ್ರಶ್ನಿಸಿದ ರೈತರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ! — ಇಂತಹ ಆರೋಪಗಳು ಇದೀಗ ಕೇಳಿಬರುತ್ತಿವೆ… ರೈತರ ಆರೋಪದ ಪ್ರಕಾರ, ದಿನನಿತ್ಯ ಟ್ರಾಫಿಕ್ ಟೀಂ’ದಾಖಲೆ ಹೆಸರಿನಲ್ಲಿ ಹಣ ವಸೂಲಿ ಮಾಡಲಾಗುತ್ತಿದೆ ಎನ್ನಲಾಗಿದೆ. ವಾಹನಗಳ ದಾಖಲೆ ಪರಿಶೀಲನೆ ನೆಪದಲ್ಲಿ ಹಣ ಕೇಳಲಾಗುತ್ತಿದೆ, ಹಣ ನೀಡದಿದ್ದರೆ ಕಿರುಕುಳ ನೀಡಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ…
ಹೂವು ಮಾರಾಟ ಮಾಡಿಕೊಂಡು ಜೀವನ ಸಾಗಿಸುವ ರೈತರ ಗಾಡಿಗಳನ್ನೇ ಅಡ್ಡಗಟ್ಟಿ ಪದೇಪದೇ ತಪಾಸಣೆ ನಡೆಸುತ್ತಿರುವುದೇಕೆ?ದಾಖಲೆಗಳಲ್ಲಿ ತಪ್ಪಿದ್ದರೆ ಕಾನೂನುಬದ್ಧ ದಂಡ ವಿಧಿಸಲಿ… ಆದರೆ ಹಣ ಕೇಳಲಾಗುತ್ತಿದೆ ಎಂಬ ಆರೋಪ ನಿಜವೇ..?
ಟ್ರಾಫಿಕ್ ನಿಯಂತ್ರಣ ಮಾಡಬೇಕಾದ ಪೊಲೀಸರ ವಿರುದ್ಧವೇ ಇಂತಹ ಗಂಭೀರ ಆರೋಪ ಕೇಳಿಬಂದಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ… ಕಿರುಕುಳದಿಂದ ಬೇಸತ್ತ ರೈತರು ಇದೀಗ ಪ್ರತಿಭಟನೆಗೆ ಮುಂದಾಗಿದ್ದಾರೆ… ಸಂಬಂಧಪಟ್ಟ ಅಧಿಕಾರಿಗಳೇ…
ರೈತರ ಆರೋಪಗಳ ಬಗ್ಗೆ ತನಿಖೆ ಯಾವಾಗ..? ಆರೋಪ ಸತ್ಯವಾಗಿದ್ದರೆ ತಪ್ಪಿತಸ್ಥರ ವಿರುದ್ಧ ಕ್ರಮ ಯಾವಾಗ..? ರೈತರ ಆಕ್ರೋಶಕ್ಕೆ ಪೊಲೀಸ್ ಇಲಾಖೆ ಯಾವ ಉತ್ತರ ನೀಡಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ….
bigtvnews | Hubli Dharwad News | Kannada News | Karnataka News Hubli News | News In Hubli | Local news

