Breaking News

ಬೆಂಗಳೂರಿನ ಖಜಾನೆ ಕಚೇರಿ ಮೇಲೆ ಲೋಕಾಯುಕ್ತ ದಾಳಿ: 70,000 ಸಂಬಳದ ಅಧಿಕಾರಿಗೆ ತಿಂಗಳಿಗೆ 6 ಲಕ್ಷ ಜಮೆ ಪತ್ತೆ!

ಬೆಂಗಳೂರು: ಸರ್ಕಾರಿ ಬಿಲ್‌ಗಳ ವಿಲೇವಾರಿಗೆ ವಿಳಂಬ ಮಾಡಿ ಕಮಿಷನ್ ಪಡೆಯಲಾಗುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಬೆಂಗಳೂರಿನ ವಿವಿಧ ಖಜಾನೆ ಕಚೇರಿಗಳ ಮೇಲೆ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. 13 ತಂಡಗಳು ಬೆಂಗಳೂರು ನಗರ, ಗ್ರಾಮಾಂತರ ಹಾಗೂ ಕೆಜಿಐಡಿ ಖಜಾನೆ ಕಚೇರಿಗಳಲ್ಲಿ ಏಕಕಾಲಕ್ಕೆ ಕಾರ್ಯಾಚರಣೆ ನಡೆಸಿವೆ. ಪರಿಶೀಲನೆ ವೇಳೆ ಬಿಲ್‌ಗಳನ್ನು ‘ರೌಂಡ್ ರಾಬಿನ್’ ನಿಯಮದಂತೆ ಸಮಾನವಾಗಿ ಹಂಚಿಕೆ ಮಾಡದೆ, ಆಯ್ದ ಸಿಬ್ಬಂದಿಗೆ ವಹಿಸಿ ವಾರಗಟ್ಟಲೆ ಬಾಕಿ ಇರಿಸಲಾಗುತ್ತಿತ್ತು ಎಂಬುದು ಪತ್ತೆಯಾಗಿದೆ. ಸಿಬ್ಬಂದಿ ಗುರುತಿನ ಚೀಟಿ, ಸಮವಸ್ತ್ರ ಧರಿಸದಿರುವುದು ಹಾಗೂ ಲೆಕ್ಕಪತ್ರಗಳನ್ನು ಸಮರ್ಪಕವಾಗಿ ನಿರ್ವಹಿಸದಿರುವುದು ಸೇರಿದಂತೆ ಹಲವು ಲೋಪಗಳು ಬೆಳಕಿಗೆ ಬಂದಿವೆ. ಮಲ್ಲೇಶ್ವರದ ಉತ್ತರ ವಿಭಾಗದ ಖಜಾನೆ ಕಚೇರಿಯಲ್ಲಿ ₹70 ಸಾವಿರ ವೇತನ ಪಡೆಯುವ ಅಧಿಕಾರಿಯೊಬ್ಬರ ಖಾತೆಗೆ 8 ತಿಂಗಳಲ್ಲಿ ಸುಮಾರು ₹23 ಲಕ್ಷ ಜಮೆಯಾಗಿರುವುದು ಪತ್ತೆಯಾಗಿದೆ. ಹಣದ ಮೂಲದ ಬಗ್ಗೆ ಸೂಕ್ತ ವಿವರಣೆ ನೀಡದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಲೋಕಾಯುಕ್ತ ಸೂಚಿಸಿದೆ.

Share News

About BigTv News

Check Also

ಮದುವೆಯಾಗಿ ಮಕ್ಕಳಿದ್ರೂ ಅಕ್ರಮ ಸಂಬಂಧ: ರೈಲಿಗೆ ತಲೆಕೊಟ್ಟು ವಿವಾಹಿತೆಯೊಂದಿಗೆ ಯುವಕ ಆತ್ಮಹತ್ಯೆ

ಮಂಡ್ಯದ ವಿಸಿ ಫಾರಂ ರಸ್ತೆಯ ರೈಲ್ವೆ ಹಳಿಯಲ್ಲಿ ರೈಲಿಗೆ ತಲೆಕೊಟ್ಟು ವಿವಾಹಿತೆ ಸಹನಾ (25) ಮತ್ತು ರಾಹುಲ್ (23) ಆತ್ಮಹತ್ಯೆಗೆ …

Leave a Reply

Your email address will not be published. Required fields are marked *