ಬೆಂಗಳೂರು: ಕಂಟೈನರ್‌ಗೆ ಬೀಗ ಹಾಕದೆ ಹೋಗಿದ್ದ ವೇಳೆ ₹30 ಲಕ್ಷ ಮೌಲ್ಯದ 130 ಮೊಬೈಲ್‌ಗಳನ್ನು ಕಳವು ಮಾಡಿದ್ದ ಆರೋಪಿಯನ್ನು ವೈಟ್‌ಫೀಲ್ಡ್ ಪೊಲೀಸರು ಬಂಧಿಸಿದ್ದಾರೆ. ಮಹದೇವಪುರದ ಮೊಹಮ್ಮದ್ ಅಲಿ (43) ಬಂಧಿತ. ನಲ್ಲೂರಹಳ್ಳಿ ಬಳಿ ಪಾರ್ಸಲ್ ಬಾಕ್ಸ್‌ಗಳನ್ನು ಅನ್‌ಲೋಡ್ ಮಾಡಿದ ಸಿಬ್ಬಂದಿ ಕಂಟೈನರ್‌ಗೆ ಬೀಗ ಹಾಕದೆ ತೆರಳಿದ್ದರು. ಇದನ್ನು ಗಮನಿಸಿದ ಆರೋಪಿ ಮೊಬೈಲ್‌ಗಳಿದ್ದ ಮೂರು ಪಾರ್ಸಲ್ ಬಾಕ್ಸ್‌ಗಳನ್ನು ಕಳವು ಮಾಡಿದ್ದ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಆತನಿಂದ 130 ಮೊಬೈಲ್‌ಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಆಟೋರಿಕ್ಷಾವನ್ನು ಜಪ್ತಿ ಮಾಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

