Breaking News

ಮನೆಗೆ ನುಗ್ಗಿ ಯುವತಿಯ ಕೊಲೆಗೆ ಯತ್ನ: ಕೇಸು ದಾಖಲು

ಕಾಸರಗೋಡು: ಮನೆಗೆ ನುಗ್ಗಿ ಯುವತಿಯ ಕೊಲೆಗೆ ಯತ್ನಿಸಿದ ಹಾಗೂ ತಡೆಯಲು ಬಂದ ಯುವತಿಯ ತಾಯಿಗೆ ಹಲ್ಲೆಗೈದ ಪ್ರಕರಣಕ್ಕೆ ಸಂಬಂಧಿಸಿ ನಿಧೀಶ್ ವಿರುದ್ಧ ಬದಿಯಡ್ಕ ಪೊಲೀಸರು ಕೊಲೆಯತ್ನ ಕೇಸು ದಾಖಲಿಸಿದ್ದಾರೆ. ಪೈಕ ಬಾಲಡ್ಕದ ಬಿ.ಶ್ರೀಷ್ಮ (21) ನೀಡಿದ ದೂರಿಗೆ ಬದಿಯಡ್ಕ ಪೊಲೀಸರು ಕೊಲೆಯತ್ನ ಕೇಸು ದಾಖಲಿಸಿದ್ದಾರೆ. ಆ.23 ರಂದು ರಾತ್ರಿ ಮನೆಗೆ ನುಗ್ಗಿ ಕೊಲೆ ಯತ್ನ ನಡೆಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಶ್ರೀಷ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಗೆ ಕಾರಣ ತಿಳಿದುಬಂದಿಲ್ಲ. ಪೂರ್ವ ದ್ವೇಷ ಘಟನೆಗೆ ಕಾರಣವೆಂದು ಪೊಲೀಸರು ಶಂಕಿಸಿದ್ದಾರೆ.

Share News

About BigTv News

Check Also

ಮದುವೆಯಾಗಿ ಮಕ್ಕಳಿದ್ರೂ ಅಕ್ರಮ ಸಂಬಂಧ: ರೈಲಿಗೆ ತಲೆಕೊಟ್ಟು ವಿವಾಹಿತೆಯೊಂದಿಗೆ ಯುವಕ ಆತ್ಮಹತ್ಯೆ

ಮಂಡ್ಯದ ವಿಸಿ ಫಾರಂ ರಸ್ತೆಯ ರೈಲ್ವೆ ಹಳಿಯಲ್ಲಿ ರೈಲಿಗೆ ತಲೆಕೊಟ್ಟು ವಿವಾಹಿತೆ ಸಹನಾ (25) ಮತ್ತು ರಾಹುಲ್ (23) ಆತ್ಮಹತ್ಯೆಗೆ …

Leave a Reply

Your email address will not be published. Required fields are marked *