ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆ, ಪ್ರವಾಹ ಮತ್ತು ಭೂಕುಸಿತದಿಂದ 80 ಜನರು ಸಾವನ್ನಪ್ಪಿದ್ದಾರೆ. ಆದರೆ, ಮಾಂಡಿ ಜಿಲ್ಲೆಯ ಧರಂಪುರದ ಒಂದು ಹಳ್ಳಿಯಲ್ಲಿ ಸಾಕು ನಾಯಿಯೊಂದು ತನ್ನ ಜೋರಾದ ಕೂಗಿನಿಂದ 20 ಕುಟುಂಬಗಳ 67 ಜನರ ಪ್ರಾಣ ಉಳಿಸಿದೆ. ಜೂನ್ 30ರ ಮಧ್ಯರಾತ್ರಿ ಶುರುವಾದ ಭಾರೀ ಮಳೆಯಿಂದ ಹಳ್ಳಿಯ ಬಹುತೇಕ ಭಾಗ ನಾಶವಾಯಿತಾದರೂ, ಈ ನಾಯಿಯ ಎಚ್ಚರಿಕೆಯಿಂದ ಜನರು ಸುರಕ್ಷಿತ ಸ್ಥಳಕ್ಕೆ ತಲುಪಿದರು.ಅಸ್ಸಾಂನಲ್ಲಿ 10 ನದಿಗಳು ಉಕ್ಕೇರಿ 10 ಜಿಲ್ಲೆಗಳು ಜಲಾವೃತಗೊಂಡಿವೆ. ಲಖಿಂಪುರ ಜಿಲ್ಲೆಯಲ್ಲಿ 78,000 ಜನರು ಅಪಾಯದಲ್ಲಿದ್ದಾರೆ. ಭೂಕುಸಿತದಿಂದ 5 ಮತ್ತು ಪ್ರವಾಹದಿಂದ 3 ಜನರು ಸಾವನ್ನಪ್ಪಿದ್ದಾರೆ. ಸಿಕ್ಕಿಂನಲ್ಲಿ ತೀಸ್ತಾ ನದಿಗೆ ವಾಹನವೊಂದು ಬಿದ್ದು ಒಬ್ಬರು ಸಾವನ್ನಪ್ಪಿದ್ದು, 8 ಮಂದಿ ಕಾಣೆಯಾಗಿದ್ದಾರೆ. ಮಣಿಪುರದಲ್ಲಿ 883 ಮನೆಗಳಿಗೆ ಹಾನಿಯಾಗಿದ್ದು, 3,802 ಜನರು ಸಂಕಷ್ಟದಲ್ಲಿದ್ದಾರೆ. 12 ಭೂಕುಸಿತಗಳು ರಾಜ್ಯವನ್ನು ಕಾಡಿವೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

