Breaking News

ಮರಳು ದಂಧೆಯಲ್ಲಿ ಖಾಕಿಯ ‘ಮಂತ್ಲಿ’ ಆಟ? ಠಾಣೆಯಲ್ಲೇ ಲಾರಿ, ಮೇಲ್ವಿಚಾರಣೆ ಯಾರದ್ದು..?

ಧಾರವಾಡ–ಹುಬ್ಬಳ್ಳಿ: ಅಕ್ರಮ ಮರಳು ಸಾಗಾಟದ ಲಾರಿಗಳನ್ನು ಬಿಡಿಸಲು ಲಂಚದ ಬೇಡಿಕೆ ಇಟ್ಟ ಆರೋಪದಲ್ಲಿ ಕೆಳಹಂತದ ಪೊಲೀಸ್ ಸಿಬ್ಬಂದಿ ಲೋಕಾಯುಕ್ತರ ಬಲೆಗೆ ಬೀಳುತ್ತಿದ್ದಂತೆ, ಇದೀಗ ಈ ಪ್ರಕರಣದ ಬೆನ್ನಲ್ಲೇ ಖಾಕಿಯ ಮೇಲೆಯೇ ಹಲವು ಗಂಭೀರ ಪ್ರಶ್ನೆಗಳು ಎದ್ದಿವೆ…

ಮರಳು ದಂಧೆಯಲ್ಲಿ ಲಾರಿಗಳಿಂದ ‘ಮಂತ್ಲಿ’ ಹಣ ಫಿಕ್ಸ್ ಮಾಡಿ ವಸೂಲಿ ಮಾಡಲಾಗುತ್ತಿತ್ತೇ..? ವಸೂಲಿ ಮಾಡಿದ ಹಣದಲ್ಲಿ ಮೇಲಧಿಕಾರಿಗಳಿಗೂ ಪಾಲು ಹೋಗುತ್ತಿತ್ತೇ..? ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ…

ಇನ್ನೊಂದೆಡೆ, ಇನ್ಸ್‌ಪೆಕ್ಟರ್‌ಗಳು ಸ್ವಲ್ಪ ಜಾಸ್ತಿ ತೆಗೆದುಕೊಳ್ಳಬೇಕಿದ್ದರೆ, ಕೆಳಹಂತದ ಸಿಬ್ಬಂದಿ ಮಾತ್ರವೇ ಲಂಚದ ಬಲೆಗೆ ಬೀಳುತ್ತಿರುವುದೇಕೆ..? ಎಂಬ ಪ್ರಶ್ನೆಯೂ ಇದೀಗ ಚರ್ಚೆಗೆ ಬಂದಿದೆ….

ಠಾಣೆಯಲ್ಲಿ ಕುಳಿತುಕೊಂಡು ಕಾನೂನು ಸುವ್ಯವಸ್ಥೆ ನೋಡಬೇಕಾದ ಅಧಿಕಾರಿಗಳ ನಡುವೆ, ಕೆಳಹಂತದ ಪೊಲೀಸರ ಮೂಲಕ ಹಣ ವಸೂಲಿ ಮಾಡಲಾಗುತ್ತಿತ್ತೇ? ಎಂಬ ಆರೋಪಗಳು ಕೇಳಿಬರುತ್ತಿವೆ…

ಲಂಚದ ಪ್ರಕರಣಕ್ಕೆ ಸಂಬಂಧಿಸಿದ ಲಾರಿ ಸುಮಾರು ಮೂರು ದಿನಗಳ ಕಾಲ ಪೊಲೀಸ್ ಠಾಣೆಯಲ್ಲೇ ಇತ್ತು ಎನ್ನಲಾಗುತ್ತಿದೆ. ಹಾಗಿದ್ದರೆ ಠಾಣೆಯ ಇನ್ಸ್‌ಪೆಕ್ಟರ್‌ ಅವರ ಗಮನಕ್ಕೆ ಈ ವಿಚಾರ ಬಂದಿರಲಿಲ್ಲವೇ..?

ಠಾಣೆಯ ಆವರಣದಲ್ಲೇ ಲಾರಿ ನಿಂತಿದ್ದರೂ ಅದರ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಿರುವುದಕ್ಕೆ ಕಾರಣವೇನು..? ಮೇಲ್ವಿಚಾರಣೆಯ ಜವಾಬ್ದಾರಿ ಹೊಂದಿರುವ ಇನ್ಸ್‌ಪೆಕ್ಟರ್‌ ಅವರಿಗೆ ಠಾಣೆಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಮಾಹಿತಿ ಇರಲಿಲ್ಲವೇ..?

ಕೆಳಹಂತದ ಸಿಬ್ಬಂದಿ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ. ಆದರೆ ಮೇಲ್ವಿಚಾರಣೆ ಮಾಡಬೇಕಾದ ಇನ್ಸ್‌ಪೆಕ್ಟರ್‌ಗಳ ವಿರುದ್ಧ ಕ್ರಮ ಏಕೆ ಇಲ್ಲ? ಎಂಬ ಪ್ರಶ್ನೆ ಇದೀಗ ಮತ್ತಷ್ಟು ಗಂಭೀರವಾಗಿದೆ…

ಮಂತ್ಲಿ’ ಹಣದ ಲೆಕ್ಕ ಎಲ್ಲಿಗೆ..? ಮರಳು ಸಾಗಾಟ ಮಾಡುವ ಲಾರಿಗಳಿಂದ ನಿಯಮಿತವಾಗಿ ಹಣ ವಸೂಲಿ ಮಾಡಲಾಗುತ್ತಿತ್ತೇ..? ಒಂದು ವೇಳೆ ‘ಮಂತ್ಲಿ’ ವ್ಯವಸ್ಥೆ ಇದ್ದರೆ, ಆ ಹಣವನ್ನು ಯಾರು ಸಂಗ್ರಹಿಸುತ್ತಿದ್ದರು.? ಯಾರಿಗೆ ಕೊಡಲಾಗುತ್ತಿತ್ತು..?

ಹಣದ ಅಂತಿಮ ಗಮ್ಯಸ್ಥಾನ ಎಲ್ಲಿತ್ತು?.ಇವು ಕೇವಲ ಆರೋಪಗಳಲ್ಲ—ತನಿಖೆ ಮೂಲಕ ಉತ್ತರ ಸಿಗಬೇಕಾದ ಪ್ರಶ್ನೆಗಳು…

ಲಂಚ ತೆಗೆದುಕೊಂಡ ಕೆಳಹಂತದ ಸಿಬ್ಬಂದಿಯನ್ನು ಹಿಡಿಯುವುದರಲ್ಲೇ ತನಿಖೆ ಮುಗಿಯಬೇಕೇ..?ಅಥವಾ ಈ ಹಣದ ಹಿಂದೆ ಇರುವ ಸಂಪೂರ್ಣ ಜಾಲವನ್ನೇ ಬಯಲಿಗೆಳೆಯಬೇಕೇ.?

ಲೋಕಾಯುಕ್ತರ ತನಿಖೆ ಈಗ ಯಾವ ಹಂತಕ್ಕೆ ತಲುಪಲಿದೆ?ತನಿಖೆಯ ವ್ಯಾಪ್ತಿ ಠಾಣೆಯ ಸಿಬ್ಬಂದಿಯಿಂದ ಮೇಲಧಿಕಾರಿಗಳವರೆಗೂ ವಿಸ್ತರಿಸಲಿದೆಯೇ..?

ಮರಳು ದಂಧೆಯಲ್ಲಿ ನಿಜವಾಗಿಯೂ ‘ಕೆಳಗಿನಿಂದ ಮೇಲಿನವರೆಗೆ’ ಹಣದ ವ್ಯವಸ್ಥೆ ಇತ್ತೇ?ಇದ್ದರೆ ಆ ವ್ಯವಸ್ಥೆಯ ಹಿಂದೆ ಯಾರಿದ್ದರು..? ಈ ಎಲ್ಲಾ ಪ್ರಶ್ನೆಗಳಿಗೆ ಪೊಲೀಸ್ ಇಲಾಖೆ ಮತ್ತು ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಸ್ಪಷ್ಟ ಉತ್ತರ ನೀಡಬೇಕಿದೆ…

ಖಾಕಿಯೊಳಗಿನ ‘ಮಂತ್ಲಿ’ ಆಟದ ಆರೋಪಕ್ಕೆ ತನಿಖೆ ಯಾವಾಗ ಪೂರ್ಣವಿರಾಮ ಹಾಕಲಿದೆ…?ಅಥವಾ ಲೋಕಾಯುಕ್ತರ ತನಿಖೆ ಇನ್ನೂ ದೊಡ್ಡ ಮುಖಗಳನ್ನು ಬಯಲಿಗೆಳೆಯಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

Share News

About Shaikh BigTv

Check Also

ವಾರ್ಷಿಕ ₹15 ಕೋಟಿ ವಹಿವಾಟು ನಡೆಸುತ್ತಿದ್ದ ನಕಲಿ ಔಷಧ ಮಾರಾಟದ ಕಿಂಗ್‌ಪಿನ್‌ ವೀರೇಶ್‌ಕುಮಾರ್‌

ನಕಲಿ ಔಷಧ ದಂಧೆಯ ಪ್ರಮುಖ ಆರೋಪಿ ವೀರೇಶ್‌ಕುಮಾರ್‌ ವಾರ್ಷಿಕ ₹15 ಕೋಟಿ ವಹಿವಾಟು ನಡೆಸುತ್ತಿದ್ದ ಎಂಬುದು ಎಸ್‌ಐಟಿ ತನಿಖೆಯಿಂದ ತಿಳಿದುಬಂದಿದೆ. …

Leave a Reply

Your email address will not be published. Required fields are marked *