ಹುಬ್ಬಳ್ಳಿ-ಧಾರವಾಡ ಅವಳಿ ನಗರದ ನೂತನ ಪೊಲೀಸ್ ಕಮಿಷನರ್ ಆಗಿ 2009ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ಬೋರ್ಸೆ ಭೂಷಣ್ ಗುಲಾಬರಾವ್ ಅವರನ್ನು ಸರ್ಕಾರ ನೇಮಕ ಮಾಡಿದೆ. ಸೈಬರ್ ಕ್ರೈಮ್, ಅಪರಾಧ ತನಿಖೆ, ನಾರ್ಕೋಟಿಕ್ಸ್ ಹಾಗೂ ಕಾನೂನು ಸುವ್ಯವಸ್ಥೆ ನಿರ್ವಹಣೆಯಲ್ಲಿ ಅವರಿಗೆ ಅನುಭವವಿದೆ. ಈ ಹಿಂದೆ ಕಮಿಷನರ್ ಆಗಿದ್ದ ಎನ್. ಶಶಿಕುಮಾರ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಲಾಗಿದ್ದು, ಯಾವುದೇ ಹೊಸ ಹುದ್ದೆ ನೀಡಲಾಗಿಲ್ಲ. ಅವರ ಸ್ಥಳ ರಹಿತ ವರ್ಗಾವಣೆ ಪೊಲೀಸ್ ವಲಯದಲ್ಲಿ ಕುತೂಹಲ ಮೂಡಿಸಿದೆ. ನೂತನ ಕಮಿಷನರ್ ಮುಂದೆ ಆನ್‌ಲೈನ್ ವಂಚನೆ, ಡ್ರಗ್ಸ್ ಜಾಲ, ರೌಡಿಸಂ ಹಾಗೂ ಅವಳಿ ನಗರದ ಸಂಚಾರ ದಟ್ಟಣೆ ನಿಯಂತ್ರಣ ಪ್ರಮುಖ ಸವಾಲುಗಳಾಗಿವೆ. ಸಾರ್ವಜನಿಕ ಸ್ನೇಹಿ ಪೊಲೀಸ್ ವ್ಯವಸ್ಥೆ ಹಾಗೂ ಕಾನೂನು ಸುವ್ಯವಸ್ಥೆ ಬಲಪಡಿಸುವ ನಿರೀಕ್ಷೆ ವ್ಯಕ್ತವಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

