Breaking News

ಆಸ್ತಿ ವಿವಾದ: ಹಾಡಹಗಲೇ ಬಿಯರ್ ಬಾಟಲ್ ಎಸೆದು ಕಾಂಗ್ರೆಸ್ ಮುಖಂಡನ ಸಹೋದರನಿಂದ ಗೂಂಡಾಗಿರಿ!

ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ಕರಿಯಪ್ಪನಹಳ್ಳಿಯಲ್ಲಿ ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಮನೆಯೊಂದರ ಮೇಲೆ ಬಿಯರ್ ಬಾಟಲಿ ಎಸೆದು ಗೂಂಡಾಗಿರಿ ನಡೆಸಿದ ಘಟನೆ ನಡೆದಿದೆ. ಥಾರ್ ರಾಕ್ಸ್ ಕಾರಿನಲ್ಲಿ ಬಂದ ಕೆಲವರು ಹಾಡಹಗಲೇ ಬಾಟಲಿ ಎಸೆದು ಪರಾರಿಯಾಗಿದ್ದು, ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಜಮೀನು ವಿವಾದದ ಹಿನ್ನೆಲೆಯಲ್ಲಿ ಎಸ್‌ಬಿಐ ಮಂಜುನಾಥ್ ಮತ್ತು ಸಿ.ಮಂಜುನಾಥ್ ಕುಟುಂಬಗಳ ನಡುವೆ ಗಲಾಟೆ ನಡೆಯುತ್ತಿದ್ದು, ಕಳೆದ ಭಾನುವಾರ ಎರಡೂ ಕಡೆಯವರು ಬನ್ನೇರುಘಟ್ಟ ಠಾಣೆಯಲ್ಲಿ ಕೌಂಟರ್ ಕೇಸ್ ದಾಖಲಿಸಿದ್ದರು. ಇದೇ ವಿವಾದ ಮುಂದುವರಿದಿದ್ದು, ವರುಣ್ ಮತ್ತು ಸಹಚರರ ಮೇಲೆ ದಾಳಿ ನಡೆಸಿದ ಆರೋಪ ಕೇಳಿಬಂದಿದೆ. ನಿನ್ನೆ ಮಧ್ಯಾಹ್ನ ಮನೆಯೊಳಗೆ ಬಿಯರ್ ಬಾಟಲಿ ಎಸೆದು ದಾಳಿ ನಡೆಸಲಾಗಿದೆ. ಘಟನೆ ಕುರಿತು ಮಾಹಿತಿ ಪಡೆದ ಬನ್ನೇರುಘಟ್ಟ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಿಸಿಟಿವಿ ದೃಶ್ಯಗಳ ಆಧಾರದಲ್ಲಿ ತನಿಖೆ ಮುಂದುವರಿಸಿದ್ದಾರೆ.

Share News

About BigTv News

Check Also

ವಾರ್ಷಿಕ ₹15 ಕೋಟಿ ವಹಿವಾಟು ನಡೆಸುತ್ತಿದ್ದ ನಕಲಿ ಔಷಧ ಮಾರಾಟದ ಕಿಂಗ್‌ಪಿನ್‌ ವೀರೇಶ್‌ಕುಮಾರ್‌

ನಕಲಿ ಔಷಧ ದಂಧೆಯ ಪ್ರಮುಖ ಆರೋಪಿ ವೀರೇಶ್‌ಕುಮಾರ್‌ ವಾರ್ಷಿಕ ₹15 ಕೋಟಿ ವಹಿವಾಟು ನಡೆಸುತ್ತಿದ್ದ ಎಂಬುದು ಎಸ್‌ಐಟಿ ತನಿಖೆಯಿಂದ ತಿಳಿದುಬಂದಿದೆ. …

Leave a Reply

Your email address will not be published. Required fields are marked *