Breaking News

ಭ್ರಷ್ಟ ಆಯುಕ್ತರ ವಿರುದ್ಧ ಪ್ರತಿಭಟನೆ.

ಚಿಕ್ಕಬಳ್ಳಾಪುರ: ಭ್ರಷ್ಟ ನಗರಸಭೆ ಆಯುಕ್ತ ಚಲಪತಿ ವಿರುದ್ದ ಹಿಡಿ ಶಾಪ ಹಾಕುತ್ತಾ, ಸಾರ್ವಜನಿಕರು ನಗರಸಭೆ ಮುಂದೆ ಬಿಂದಿಗೆಗಳನ್ನು ಹಿಡಿದು ಪ್ರತಿಭಟನೆ ಮಾಡುತ್ತಿರುವ
ದೃಶ್ಯ ಆಂದ್ರ ಪ್ರದೇಶದ ಗಡಿ ಜಿಲ್ಲೆಯ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ನಗರದಲ್ಲಿಂದು‌ ಕಂಡು ಬಂದಿತು.‌
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕು ಪುರಸಭೆಯಿಂದ ಮೇಲ್ದರ್ಜೆಗೆ ಏರಿ ಕೇವಲ ಎರಡು ಮೂರು ವರ್ಷಗಳು ಕಳೆದಿವೆ ಇಲ್ಲಿ ಇದುವರೆಗೂ ನಾಲ್ಕೈದು ನಗರಸಭೆ ಅಧಿಕಾರಿಗಳು ಕಾರ್ಯ ನಿರ್ವಹಿಸಿದ್ದಾರೆ , ಇದೇ ನಗರಸಭೆಯಲ್ಲಿ ಆರ್ ಒ ಆಗಿ ಕಾರ್ಯನಿರ್ವಹಿಸುತ್ತಿದ್ದ ಚಲಪತಿ ಇದೇ ನಗರಸಭೆಯಲ್ಲಿ ಆಯುಕ್ತರಾಗಿ ಪ್ರಮೋಷನ್ ಪಡೆದುಕೊಂಡು ಆಯುಕ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ , ಆದರೆ ಅಸ್ವಚ್ಛತೆಯ ಜೊತೆಗೆ ,ನಗರದಲ್ಲಿ ಹದಗಟ್ಟಿರುವ ರಸ್ತೆಗಳು , ಕುಡಿಯುವ ನೀರಿನ ಸಮಸ್ಯೆ , ಗಬ್ಬು ನಾರುತ್ತಿರುವ ಚರಂಡಿಗಳಿಂದ ನಗರವಾಸಿಗಳು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗಿ ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿದ್ದಾರೆ, ಸಮಸ್ಯೆಗಳನ್ನು ಕೇಳಲು ಹೋದರೆ ಆಯುಕ್ತರೇ ಸರ್ವಾಧಿಕಾರಿಯಂತೆ ವರ್ತನೆ ಮಾಡುವುದಲ್ಲದೆ, ಪೌರಕಾರ್ಮಿಕರಿಗೆ ನಿತ್ಯ ಕಿರುಕುಳ ನೀಡುತ್ತಿದ್ದಾರೆ ,ಎಂದು ಅಲ್ಲಿನ ಜನ ಸಾಮಾನ್ಯರು ಆರೋಪ ಮಾಡುತ್ತಿದ್ದಾರೆ. ಇಂದು ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ನಗರಸಭೆಯ ಮುಂದೆ ಖಾಲಿ ಬಿಂದಿಗೆಗಳನ್ನು ಒತ್ತು ಬಂದಿದ್ದ ನೂರಾರು ಮಹಿಳೆಯರು ಹಾಗು ನಗರ ಸಭೆ ಸದಸ್ಯರ ಒಕ್ಕೋರಲಿನ ಒತ್ತಾಯ ಒಂದೇ ಆಗಿತ್ತು, ಅದೇನಪ್ಪ ಅಂದ್ರೆ ನಗರಸಭೆಯ ಪೌರಾಯುಕ್ತ ಚಲಪತಿಯನ್ನ ಕೂಡಲೇ ವರ್ಗಾವಣೆ ಮಾಡಬೇಕು, ನಂತರ ಅವರ ವಿರುದ್ದ ತನಿಕೆ ಆಗಬೇಕು ಎಂಬುದು. ನಗರಕ್ಕೆ ವರ್ಗಾವಣೆಯಾಗಿ ಬಂದಾಗಿನಿಂದ ನಗರಸಭೆ ಸದಸ್ಯರಿಗೆ ಹಾಗು ಜನರಿಗೆ ಸ್ಪಂದಿಸುತ್ತಿಲ್ಲ, ಕನಿಷ್ಠ ಮೂಲಭೂತ ಸೌಕರ್ಯಗಳ ಒದಗಿಸುವಲ್ಲಿ ಕೂಡ ವಿಫಲವಾಗಿದ್ದಾರೆ ಎಂದು ಘೋಷಣೆ ಗಳನ್ನ ಕೂಗಿದ್ದಾರೆ.
ಹೀಗೆ ಇವರು ಇಲ್ಲಿಗೆ ಬಂದಾಗಿನಿಂದ ಒಂದಿಲ್ಲೊಂದು ಹಗರಣ ಆರೋಪಗಳಲ್ಲಿ ಇವರ ಹೆಸರು ತಳುಕು ಹಾಕಿ ಕೊಂಡಿದೆ. ಇನ್ನು ಖುದ್ದು ಅವರನ್ನೇ ಮಾತನಾಡಿಸಿ ಸತ್ಯ ಸತ್ಯತೆ ತಿಳಿಯೋಣ ಅಂದ್ರೆ ಆಸಾಮಿ ನಾಪತ್ತೆ! ಇಂದು ಜನ ದಂಗೆ ಹೇಳುವುದನ್ನು ಮೋದಲೇ ತಿಳಿದು ಕೊಂಡಿದ್ದ ಚಲಪತಿ ಇಂದು ಟ್ರೈನಿಂಗ್ ಮೇಲೆ ಎಲ್ಲೋ ಹೋಗಿದ್ದಾರಂತೆ
ಒಟ್ಟಾರೆಯಾಗಿ ಆರೋಪಗಳು ನಿಜ ಇರಲಿ ಇಲ್ಲ ಸುಳ್ಳೇ ಇರಲಿ ಸರ್ಕಾರಿ ಅಧಿಕಾರಿಯಾಗಿ ಜನರಿಗೆ ಉತ್ತರಿಸಬೇಕಾದ್ದು ಅಧಿಕಾರಿಯ ಕರ್ತವ್ಯ. ಆದರೆ ಜನ ಪ್ರತಿನಿಧಿಗಳಿಗೆ ಹಾಗು ಜನರಿಗೆ ಆವಾಜ್ ಹಾಕುತ್ತಾ ಕೈಗೆ ಸಿಗದಂತೆ ಒಡಾಡುವುದು ಎಷ್ಟು ತಾನೆ ಸರಿ? ಇನ್ನು ಮೂರು ಬೋರ್ವೆಲ್ ಗೆ 78 ಲಕ್ಷ ಹಣ ಖರ್ಚು ಮಾಡಿರುವುದು ಬಹಿರಂಗವಾಗಿದೆ. ಇನ್ನಾದರು ಜನ ಪ್ರತಿನಿಧಿಗಳು ಹಾಗು ಜಿಲ್ಲಾಧಿಕಾರಿಗಳು ಇವರ ಮೇಲೆ ತನಿಖೆಗೆ ಆದೇಶಿಸಿ ಸರ್ಕಾರದ ಹಣ ಹಾಗು ಸರ್ಕಾರದ ಅಧಿಕಾರ ದುರುಪಯೋಗ ತಡೆಯಬೇಕಿದೆ

Share News

About admin

Check Also

ಒಂದು ತಿಂಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿದ ಆರೋಪಿ ಸತೀಶ್ ಪಾತ್ರಿ..!

ಆರೋಪಿಗೆ ಠಾಣೆಯ ಮಾಹಿತಿ ಸೋರಿಕೆ ಆರೋಪ; ಕಾನ್ಸ್‌ಟೇಬಲ್ ಕಾಂತೇಶ್ ಅಮಾನತು! ಚಿಕ್ಕಮಗಳೂರು: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಸತೀಶ್ ಪಾತ್ರಿ ಕಳೆದ …

Leave a Reply

Your email address will not be published. Required fields are marked *