Breaking News

ಕಮಿಷನರ್ ಬಂದಿದ್ದು 2–3 ದಿನ..! ಇನ್ಸ್‌ಪೆಕ್ಟರ್ ಯಾರು, ಪಿಎಸ್ಐ ಯಾರು ಅನ್ನೋದೇ ಗೊತ್ತಿಲ್ಲ..!

ಹುಬ್ಬಳ್ಳಿ-ಧಾರವಾಡ: ನೂತನ ಪೊಲೀಸ್ ಕಮಿಷನರ್ ಭೂಷಣ್ ಬೋರಸೆ ಅವರು ಹುಬ್ಬಳ್ಳಿಗೆ ಬಂದು ಇನ್ನೂ ಎರಡರಿಂದ ಮೂರು ದಿನಗಳಷ್ಟೇ ಆಗಿದೆ…

ಹೊಸ ಅಧಿಕಾರಿಗೆ ಯಾವ ಠಾಣೆಯ ಇನ್ಸ್‌ಪೆಕ್ಟರ್ ಯಾರು? ಯಾವ ಪಿಎಸ್ಐ ಯಾರು? ಯಾವ ಅಧಿಕಾರಿಯ ಜವಾಬ್ದಾರಿ ಏನು? ಎನ್ನುವುದೇ ಸಂಪೂರ್ಣವಾಗಿ ತಿಳಿದುಕೊಳ್ಳಲು ಸಮಯ ಬೇಕಾಗುತ್ತದೆ. ಹೀಗಿರುವಾಗ…

ರೌಡಿ ಶೀಟರ್ ಯಾರು?ಕೊಲೆ ಪ್ರಕರಣಗಳಲ್ಲಿ ಆರೋಪಿಗಳಾಗಿರುವವರು ಯಾರು.? ಗಾಂಜಾ–ಡ್ರಗ್ಸ್ ಜಾಲದ ಹಿಂದೆ ಇರುವವರು ಯಾರು.?ಅಪರಾಧ ಹಿನ್ನೆಲೆಯವರು ಯಾರು..?

ಇಂತಹ ಸೂಕ್ಷ್ಮ ಮಾಹಿತಿ ಹೊಸದಾಗಿ ಬಂದಿರುವ ಕಮಿಷನರ್‌ಗೆ ತಕ್ಷಣ ತಿಳಿದಿರಬೇಕು ಎಂದು ನಿರೀಕ್ಷಿಸುವುದೇ ಎಷ್ಟು ಸರಿ?

ಇಲ್ಲೇ ಪ್ರಶ್ನೆ ಕಮಿಷನರ್ ಸಾಹೇಬರ ಮೇಲಲ್ಲ…ಪ್ರಶ್ನೆ ಅವರ ಸುತ್ತಲಿನ ವ್ಯವಸ್ಥೆಯ ಮೇಲಿದೆ..!

ಕಮಿಷನರ್‌ಗೆ ಸ್ಥಳೀಯ ಅಪರಾಧಿಗಳ ಹಿನ್ನೆಲೆ, ರೌಡಿ ಶೀಟರ್‌ಗಳ ಪಟ್ಟಿ, ಡ್ರಗ್ಸ್ ಪೆಡ್ಲರ್‌ಗಳ ಮಾಹಿತಿ ಹಾಗೂ ಸೂಕ್ಷ್ಮ ವ್ಯಕ್ತಿಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಗುಪ್ತಚರ ಸಿಬ್ಬಂದಿ ಮಾಹಿತಿ ನೀಡಬೇಕಲ್ಲವೇ…?

ಸಾಹೇಬರು ಬಂದಿದ್ದು ಈಗಷ್ಟೇ…

ಆದರೆ ವ್ಯವಸ್ಥೆ ಇಲ್ಲಿ ಬಹಳ ಹಿಂದಿನಿಂದಲೇ ಇದೆ..!ಹಾಗಿದ್ದರೂ ಮಾಹಿತಿ ನೀಡುವ ಕೆಲಸ ಯಾರು ಮಾಡಬೇಕು ಅನ್ನೋ ಪ್ರಜ್ಞೆ ಕೆಲವರಿಗೆ ಇರಬೇಕಲ್ಲವೇ..?

ಒಬ್ಬರು-ಇಬ್ಬರು ಸಿಬ್ಬಂದಿಯ ನಿರ್ಲಕ್ಷ್ಯದಿಂದ ನೂತನ ಕಮಿಷನರ್‌ರ ಹೆಸರು ಅಥವಾ ಪೊಲೀಸ್ ಇಲಾಖೆಯ ಘನತೆಗೆ ಧಕ್ಕೆ ಬರುವ ಪರಿಸ್ಥಿತಿ ನಿರ್ಮಾಣವಾಗಬಾರದು….

ಕಮಿಷನರ್ ಸಾಹೇಬರೇ — ನೀವು ಫುಲ್ ಅಲರ್ಟ್ ಆಗಿರಿ..!

ನಿಮ್ಮ ಸುತ್ತಲಿನ ವ್ಯವಸ್ಥೆಯನ್ನೂ ಅಲರ್ಟ್ ಮಾಡಿ… ಯಾರು ಬರುತ್ತಾರೆ, ಯಾರ ಹಿನ್ನೆಲೆ ಏನು, ಯಾಕೆ ಬರುತ್ತಾರೆ — ಮಾಹಿತಿ ಪಡೆದು ಕೆಲಸ ಮಾಡುವ ವ್ಯವಸ್ಥೆ ಇನ್ನಷ್ಟು ಬಲವಾಗಲಿ….

ರೌಡಿ ಶೀಟರ್‌ಗಳು, ಕೊಲೆ ಸೇರಿದಂತೆ ಗಂಭೀರ ಅಪರಾಧ ಪ್ರಕರಣಗಳ ಆರೋಪಿಗಳು, ಗಾಂಜಾ–ಡ್ರಗ್ಸ್ ಪೆಡ್ಲರ್‌ಗಳು ಹಾಗೂ ಅಪರಾಧ ಹಿನ್ನೆಲೆಯವರಿಂದ ಪೊಲೀಸ್ ಇಲಾಖೆ ಅಗತ್ಯ ಅಂತರ ಕಾಯ್ದುಕೊಂಡರೆ, ಖಾಕಿಯ ಘನತೆ ಇನ್ನಷ್ಟು ಕ್ಲೀನ್ ಆಗುತ್ತದೆ….

ಕಮಿಷನರ್ ಬೋರಸೆ ಸಾಹೇಬರು ಹೊಸವರು…

ಆದರೆ ಮಾಹಿತಿ ವ್ಯವಸ್ಥೆ ಹೊಸದಲ್ಲ..! ಹೀಗಾಗಿ, ಕಮಿಷನರ್‌ರ ಹೆಸರು ಕಳಂಕಗೊಳ್ಳದಂತೆ ಎಚ್ಚರ ವಹಿಸುವ ಜವಾಬ್ದಾರಿ ಕಮಿಷನರ್ ಕಚೇರಿಯ ಪ್ರತಿಯೊಬ್ಬ ಸಿಬ್ಬಂದಿಯ ಮೇಲೂ ಇದೆ….

Share News

About Shaikh BigTv

Check Also

2 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದ RFO ಲೋಕಾಯುಕ್ತ ಬಲೆಗೆ

ತುಮಕೂರು: ಗುಬ್ಬಿ ವಲಯ ಅರಣ್ಯಾಧಿಕಾರಿ (RFO) ಕೆ.ಎಸ್. ಸತೀಶ್ ಚಂದ್ರ ಅವರು ₹2 ಲಕ್ಷ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ …

Leave a Reply

Your email address will not be published. Required fields are marked *