Breaking News

ಬಿಜೆಪಿ ವಾಮ ಮಾರ್ಗದ ಮೂಲಕ ಗೆಲ್ಲಲು ಹೊರಟಿದೆ :
ಸಿ.ಎಂ.ಇಬ್ರಾಹಿಂ


ಹುಬ್ಬಳ್ಳಿ : ಜನವರಿಯಲ್ಲಿ ಪಂಚರತ್ನ ಬಾಂಬೆ ಕರ್ನಾಟಕ ಮತ್ತು ಹೈದ್ರಾಬಾದ್ ಕರ್ನಾಟಕ ಬರಲಿದೆ. ಜೆಡಿಎಸ್‌ನಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗುತ್ತಿದೆ‌ ಟಿಕೇಟ್‌ಗೆ ಅರ್ಜಿ ಹಾಕಲು ನಾವು ಹಣ ಇಟ್ಟಿಲ್ಲ ಧಾರವಾಡ ಜಿಲ್ಲೆಯಲ್ಲಿ ಬಿಜೆಪಿಗೆ ಸೋಲಿನ ಭಯ ಕಾಡುತ್ತಿದೆ‌ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ಬಿಜೆಪಿ ವಾಮ ಮಾರ್ಗದ ಮೂಲಕ ಗೆಲ್ಲಲು ಹೊರಟಿದೆ. ನಾವು ಚುನಾವಣೆ ಮುಂಚೆಯೇ ಕೋರ್ಟ್‌ಗೆ ಹೋಗುತ್ತೇವೆ ಇನ್ನೂ ಅನೇಕರು ನಮ್ಮ‌ ಪಕ್ಷವನ್ನ ಸೇರಲಿದ್ದಾರೆ. ದೇಶ ರಾಜ್ಯ ಈಗಾಗಲೇ ಆರ್ಥಿಕವಾಗಿ ದಿವಾಳಿಯಾಗುತ್ತಿದೆ ಆದ್ದರಿಂದ ಮಧ್ಯಂತರ ಚುನಾವಣೆ ಆಗಬೇಕು ಈಗಾಗಲೇ ಗುಜರಾತ್ ಚುನಾವಣೆ ಮುಗಿದಿದೆ ಜನವರಿಯಲ್ಲಿ ನಮ್ಮ ರಾಜ್ಯದ ಚುನಾವಣೆ ಘೋಷಣೆ ಆಗಬೇಕು ಬಿಜೆಪಿಯವರು ರೌಡಿಗಳನ್ನ ರಾಜಕೀಯಕ್ಕೆ ಕರೆದುಕೊಂಡು ಬರ್ತಾ ಇದ್ದಾರೆ ಅಂತರನ್ನ ರಾಜಕೀಯಕ್ಕೆ ಕರೆದುಕೊಂಡು ಬರಬಾರದು ಬಿಜೆಪಿಯಲ್ಲಿ ಬೊಮ್ಮಾಯಿಗೆ ಸ್ವಾತಂತ್ರ್ಯ ಇಲ್ಲ
ಕೇಶವ ಕೃಪಾ ಹೇಳಿದ ಹಾಗೆ ಕೆಲವನ್ನ ಬೊಮ್ಮಾಯಿ ಮಾಡುತ್ತಿದ್ದಾರೆ

ಹುಬ್ಬಳ್ಳಿ-ಧಾರವಾಡದಲ್ಲಿ ಜೋಶಿಯವರದ್ದೇ ನಡೆಯುತ್ತದೆ ಅಧಿವೇಶನದ ನಂತರ ಮುಖ್ಯಮಂತ್ರಿ ಬದಲಾವಣೆ ವಿಚಾರ ಅವರಿಗೆ ಬಿಟ್ಟಿದ್ದು‌ ಆದ್ರೆ ಚುನಾವಣೆ ನಡೆದ ನಂತರ ಮುಖ್ಯಮಂತ್ರಿ ಬದಲಾವಣೆ ಆಗುವುದು ‌ಖಚಿತ
ಮುಂದಿನ‌ ಚುನಾವಣೆಯಲ್ಲಿ ಬಿಜೆಪಿಯವರು 50-60 ಸ್ಥಾನವನ್ನ ಸಹ ಗೆಲ್ಲುವುದಿಲ್ಲ .ಈ ಬಾರಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದೇ ಬರುತ್ತದೆ ಎಂದರು.

Share News

About BigTv News

Check Also

ಬೆಂಗಳೂರಿನಲ್ಲಿ ಮತ್ತೊಂದು ನಕಲಿ ಔಷಧ ಜಾಲ ಪತ್ತೆ, 90ಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ಪೂರೈಕೆಯಾಗಿತ್ತು ಫೇಕ್ ಮೆಡಿಸಿನ್

ಬೆಂಗಳೂರು: ಮಿನರ್ವ್ ಸರ್ಕಲ್‌ನ ಕೃಪಾ ಹೆಲ್ತ್‌ಕೇರ್‌ ಮೇಲೆ ಎಸ್‌ಐಟಿ ಹಾಗೂ ಔಷಧ ನಿಯಂತ್ರಣ ಇಲಾಖೆ ಜಂಟಿಯಾಗಿ ದಾಳಿ ನಡೆಸಿ ನಕಲಿ …

Leave a Reply

Your email address will not be published. Required fields are marked *