ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ ಪಡೆದ ಆರೋಪ ಡಾ. ಅಂಕಿತಾ ಯರಗಲ್ ವಿರುದ್ಧ ಕೇಳಿಬಂದಿದೆ. 2026ರ ಮಾರ್ಚ್‌ನಲ್ಲಿ MD ಪ್ಯಾಥಾಲಜಿ ಕೋರ್ಸ್‌ಗೆ ಪ್ರವೇಶ ಪಡೆದ ಬಳಿಕ ಕ್ಲಿನಿಕ್‌ಗೆ ಸರಿಯಾಗಿ ಹಾಜರಾಗಿಲ್ಲ ಎನ್ನಲಾಗಿದ್ದು, ಇದರಿಂದ ವಾಂಬೆ ಕಾಲೋನಿಯ ‘ನಮ್ಮ ಕ್ಲಿನಿಕ್’ ಬಹುತೇಕ ಬಂದ್ ಸ್ಥಿತಿಯಲ್ಲಿದೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಡಿಹೆಚ್ಓ ಡಾ. ರಾಜಕುಮಾರ ಯರಗಲ್ ವೇತನ ತಡೆಹಿಡಿಯಲಾಗಿದೆ ಎಂದರೆ, THO ಸರಸ್ವತಿ ಮಾಗಿ MD ವ್ಯಾಸಂಗದ ಮಾಹಿತಿ ಇರಲಿಲ್ಲ, ವಿಚಾರಣೆ ನಡೆಸಿ ನೋಟಿಸ್ ನೀಡಲಾಗುವುದು ಎಂದು ತಿಳಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

