Breaking News

ಗಣಪತಿ ವಿಸರ್ಜನೆ ವೇಳೆ ಯುವಕರ ನಡುವೆ ಗಲಾಟೆ, ಓರ್ವ ಸಾವು!

ತುಮಕೂರು: ಗಣೇಶ ವಿಸರ್ಜನೆ ವೇಳೆ ನಡೆದ ಜಗಳ ವಿಕೋಪಕ್ಕೆ ತಿರುಗಿ 17 ವರ್ಷದ ಸಿಂಹಾದ್ರಿ ಮೃತಪಟ್ಟ ಘಟನೆ ಮಧುಗಿರಿ ತಾಲೂಕಿನ ಕಾಸಪುರ ಗ್ರಾಮದಲ್ಲಿ ನಡೆದಿದೆ. ಬಂಡೆಗುಂಡ ಮಾರುತೇಶ್ (24) ಕೃತ್ಯವೆಸಗಿದ ಆರೋಪಿಯಾಗಿದ್ದಾನೆ. ಗಣೇಶ ವಿಸರ್ಜನೆ ಸಂದರ್ಭದಲ್ಲಿ ಮಾರುತೇಶ್ ಹಾಗೂ ಸಿಂಹಾದ್ರಿ ನಡುವೆ ಮಾತಿಗೆ ಮಾತು ಬೆಳೆದು ಜಗಳ ನಡೆದಿದೆ. ಈ ವೇಳೆ ಮಾರುತೇಶ್ ಸಿಂಹಾದ್ರಿಯನ್ನು ಜೋರಾಗಿ ತಳ್ಳಿದ್ದು, ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡ ಬಾಲಕ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ. ಘಟನೆ ಬಳಿಕ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಬಿಗಿ ಬಂದೋಬಸ್ತ್ ಕಲ್ಪಿಸಿದ್ದಾರೆ. ಮಿಡಿಗೇಶಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಮಾರುತೇಶ್‌ನನ್ನು ವಶಕ್ಕೆ ಪಡೆದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Share News

About BigTv News

Check Also

ತೋಟದಲ್ಲಿ ಗಾಂಜಾ ಗಿಡ ಬೆಳೆದು ಸಿಕ್ಕಿಬಿದ್ದ ಪೊಲೀಸಪ್ಪನ ಪುತ್ರ: ಅತ್ತ ತಂದೆಯಿಂದ ಜಾಗೃತಿ, ಇತ್ತ ಮಗನಿಂದ ಕುಕೃತ್ಯ!

ತುಮಕೂರು: ಡ್ರಗ್ಸ್‌ ಮುಕ್ತ ಸಮಾಜ ನಿರ್ಮಾಣಕ್ಕೆ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳುತ್ತಿರುವ ನಡುವೆಯೇ, ಪೊಲೀಸ್ ಸಿಬ್ಬಂದಿಯ ಪುತ್ರನೇ ಗಾಂಜಾ ಗಿಡ …

Leave a Reply

Your email address will not be published. Required fields are marked *