Breaking News

ಬೆಂಗಳೂರಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ಸಿಕ್ಕ ಸಿಕ್ಕವರ ಮೇಲೆ ದಾಳಿ ಆತಂಕ ಸೃಷ್ಟಿಸಿದ ಪುಂಡರು

ಬೆಂಗಳೂರು: ಉತ್ತರಹಳ್ಳಿ ರಸ್ತೆಯಲ್ಲಿ ಮಾರಕಾಸ್ತ್ರ ಹಿಡಿದು ಬಂದ ಪುಂಡರ ಗುಂಪೊಂದು ಸಾರ್ವಜನಿಕರ ಮೇಲೆ ದಾಳಿ ನಡೆಸಿರುವ ಘಟನೆ ಸುಬ್ರಮಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ರಾತ್ರಿ 8.30ರ ಸುಮಾರಿಗೆ ಸರ್ಕಲ್ ಮಾರಮ್ಮ ದೇವಸ್ಥಾನದ ಬಳಿ ನಾಲ್ಕೈದು ಸ್ನೇಹಿತರು ಮಾತನಾಡುತ್ತಿದ್ದಾಗ, ನಾಲ್ಕೈದು ಬೈಕ್‌ಗಳಲ್ಲಿ ಬಂದ ಆರೇಳು ಮಂದಿ “ಸೇಂದಿಲ್ ಎಲ್ಲಿ?” ಎಂದು ವಿಚಾರಿಸಿ ಮಚ್ಚು, ಲಾಂಗ್‌ಗಳಿಂದ ಹಲ್ಲೆಗೆ ಮುಂದಾಗಿದ್ದಾರೆ. ಸ್ನೇಹಿತರು ಓಡಿ ತಪ್ಪಿಸಿಕೊಂಡಿದ್ದು, ಕಿರಣ್ ಎಂಬಾತ ಸಿಕ್ಕಿಬಿದ್ದು ಮಚ್ಚಿನ ದಾಳಿಗೆ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದಾದ ಕೆಲವೇ ನಿಮಿಷಗಳಲ್ಲಿ ಇದೇ ಗುಂಪು ಅರೆಹಳ್ಳಿ ಆರ್ಚ್ ಬಳಿಯ ಮೀನು ಅಂಗಡಿಗೆ ನುಗ್ಗಿ ಮೀನು ಸೇವಿಸುತ್ತಿದ್ದವರ ಮೇಲೂ ದಾಳಿ ನಡೆಸಿದೆ. ಶ್ರೀನಿವಾಸ್, ರಘುನಂದನ್ ಸೇರಿದಂತೆ ಮೂವರು ಗಾಯಗೊಂಡಿದ್ದಾರೆ. ಘಟನೆಗೆ ಕಾರಣ ತಿಳಿದುಬಂದಿಲ್ಲ. ಸುಬ್ರಮಣ್ಯಪುರ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.

Share News

About BigTv News

Check Also

ಪ್ರೀತಿಸಿ ಮದುವೆಯಾದ ಜೋಡಿಗೆ ಪೊಲೀಸರೇ ವಿಲನ್ – ಕಟ್ಟಿದ್ದ ತಾಳಿ ಬಿಚ್ಚಿಸಿ ಕಿರುಕುಳ?

ತುಮಕೂರು: ಪ್ರೀತಿಸಿ ಮದುವೆಯಾದ ನವಜೋಡಿಗೆ ರಕ್ಷಣೆ ನೀಡಬೇಕಾದ ಪೊಲೀಸರೇ ಯುವತಿಯ ಪೋಷಕರೊಂದಿಗೆ ಸೇರಿ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಮಧುಗಿರಿಯಲ್ಲಿ …

Leave a Reply

Your email address will not be published. Required fields are marked *