Breaking News

ಅಧಿಕಾರಿಗಳ ನಿರ್ಲಕ್ಷ್ಯ ಕಸವೀಲೆವಾರಿ ವಾಹನದಲ್ಲಿ ಬೆಂಕಿ ಅವಗಡ

ಬೆಂಗಳೂರು; ಮಲ್ಲೇಶ್ವರಂ ನಲ್ಲಿ ಇರುವ ಮರ ವಿಜ್ಞಾನ ಮತ್ತು ತಾಂತ್ರಿಕ ಸಂಸ್ಥೆ ಕಛೇರಿಯ (IWST) ಹೊರಾಂಗಣದಲ್ಲಿ ಘನ ವ್ಯಾಜ್ಯ ಮತ್ತು ಕಸ ತುಂಬಿಕೊಳ್ಳವ ವಾಹನಕ್ಕೆ ರಾಸಾಯನಿಕ ದ್ರವ್ಯದ ಸ್ಫೋಟದಿಂದ ವಾಹನಕ್ಕೆ ಬೆಂಕಿ ಹತ್ತಿಕೊಂಡುದೆ ತದನಂತರದಲ್ಲಿ ಉರಿಯುವುದನ್ನು ಕಂಡು ಸ್ಥಳೀಯ ನಿವಾಸಿಗಳು ಹಾಗೂ ಅಧಿಕಾರಿಗಳು ಆತಂಕಕ್ಕೆ ಒಳಗಾಗಿದ್ದರು. ನತಂರದಲ್ಲಿ ಸ್ಥಳದಲ್ಲಿ ಸಿಬ್ಬಂದಿಗಳು ಬೆಂಕಿ ನಂದಿಸಲು ಹರಸಾಹಸ ಪಟ್ಟರು. ಕೆಲ ಗಂಟೆಗಳ ಕಾಲ ಆತಂಕದ ವಾತವರಣ ಸೃಷ್ಟಿಯಾಗಿತ್ತು ನಂತರದಲ್ಲಿ ಸ್ಥಳೀಯರು ಮತ್ತು ಸಿಬ್ಬಂದಿಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದರು,

ಮುಂಜಾಗ್ರತೆ ಕ್ರಮಗಳನ್ನು ಅನುಸರಿಸದೆ ಏಕಾ ಏಕಿ ರಾಸಾಯನಿಕ ದ್ರವ್ಯಗಳನ್ನು ಕಸ ವಿಲೇವಾರಿ ಮಾಡುವ ವಾಹನಕ್ಕೆ ಹಾಕಿದ್ದ ಹಿನ್ನಲೆ ರಾಸಾಯನಿಕ ದ್ರವ್ಯ ಸೋರಿಕೆಯಿಂದ ಈ ಬೆಂಕಿ ಅವಘಡ ಸಂಭವಿಸಿದೆ. ಮುಂಜಾಗ್ರತೆ ಕ್ರಮ ವಹಿಸಬೇಕು. ಅದೃಷ್ಟವಶ ಯಾವುದೇ ದೊಡ್ಡ ಅನಾಹುತ ಆಗದೇ ಇರುವುದರಿಂದ ಸ್ಥಳೀಯ ನಿವಾಸಿಗಳು ನಿಟ್ಟುಸಿರು ಬಿಟ್ಟಿದ್ದಾರೆ,

ಇಂತಹ ಘಟನೆಯಿಂದ ಸ್ಥಳೀಯರು ಭಯ ವಾತಾವರಣದಲ್ಲಿ ಇರುವಂತಾಗಿದೆ, ಅಧಿಕಾರಿಗಳು ಮುಂಜಾಗ್ರತಾ ಕ್ರಮ ವಹಿಸದೆ ಇದ್ದರೆ ಇಂತಹ ಘಟನೆಗಳು ಮರುಕಳಿಸುತ್ತವೆ,ಆದ್ದರಿಂದ ಅಧಿಕಾರಿಗಳಿಗಳು ಮುಂಜಾಗ್ರತಾ ಕ್ರಮ ತೆಗೆದುಕೊಂಡು ಕಸವಿಲೇವಾರಿ ಮಾಡುವಾಗ ರಸಾಯಾನಿಕಗಳನ್ನು ಕಸಕ್ಕೆ ಹಾಕದೆ ನಿಗದಿ ಪಡಿಸಿದ ಸ್ಥಳಕ್ಕೆ ಹಾಕಬೇಕು

Share News

About BigTv News

Check Also

ಇನ್ಸ್‌ಪೆಕ್ಟರ್ ಪೋಲಿ ಮಾತು ವೈರಲ್! ರಾಸಲೀಲೆ ಆರೋಪ ಸದ್ದು!

ಯಶು ಬೇಬಿ ಆಡಿಯೋ ಲೀಕ್! ಇನ್ಸ್‌ಪೆಕ್ಟರ್ ಪೋಲಿ ಮಾತು ವೈರಲ್.. ಯಶು ಬೇಬಿ ಆಡಿಯೋ ಲೀಕ್! ಖಾಕಿ ಮೇಲೆ ಕಪ್ಪು …

Leave a Reply

Your email address will not be published. Required fields are marked *