ನೆಲಮಂಗಲ: ಅರಿಶಿನಕುಂಟೆ ಸಮೀಪದ ಅಕ್ಷರ ಕೌಂಟಿ ಲೇಔಟ್‌ನಲ್ಲಿ ಹೆಲ್ಮೆಟ್ ಧರಿಸಿ ಬೈಕ್‌ನಲ್ಲಿ ಬಂದ ಅಪರಿಚಿತ ವ್ಯಕ್ತಿಯೊಬ್ಬ ರಸ್ತೆಬದಿ ನಿಲ್ಲಿಸಿದ್ದ ಕಿಯಾ ಕಾರಿನ ಮೇಲೆ ಸಿಆರ್‌ಆರ್ ರಾಡ್‌ನಿಂದ ದಾಳಿ ನಡೆಸಿ ಹಾನಿಗೊಳಿಸಿದ್ದಾನೆ. ಸಿಸಿಟಿವಿ ದೃಶ್ಯಾವಳಿಯಲ್ಲಿ ದುಷ್ಕರ್ಮಿ ಕಾರಿನ ಮುಂಭಾಗ, ಹಿಂಭಾಗ, ಕಿಟಕಿ ಗ್ಲಾಸ್ ಹಾಗೂ ಬಾಡಿ ಭಾಗಕ್ಕೆ ರಾಡ್‌ನಿಂದ ಹೊಡೆದು ಹಾನಿ ಮಾಡಿ ಸ್ಥಳದಿಂದ ಪರಾರಿಯಾಗಿರುವುದು ಕಂಡುಬಂದಿದೆ. ಕಾರು ಸ್ಥಳೀಯ ನಿವಾಸಿ ಭರತ್ ಅವರಿಗೆ ಸೇರಿದ್ದಾಗಿದೆ. ಘಟನೆ ಕುರಿತು ಭರತ್ ನೀಡಿದ ದೂರಿನ ಮೇರೆಗೆ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಯ ಪತ್ತೆಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವೈಯಕ್ತಿಕ ದ್ವೇಷವೇ ಅಥವಾ ಕಿಡಿಗೇಡಿತನವೇ ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news
