Breaking News

ಹೆಸ್ಕಾಂ ಎಇಇ ದಂಪತಿ ಮನೆ-ಕಚೇರಿಗೆ ಲೋಕಾಯುಕ್ತ ದಾಳಿ..! ಅಪಾರ ಚಿನ್ನ, ನಗದು ಪತ್ತೆ ಶಂಕೆ..

ಬೆಳ್ಳಂಬೆಳಗ್ಗೆ ಕರೆಂಟ್ ಅಧಿಕಾರಿಗಳಿಗೆ ಶಾಕ್..!

ಅಕ್ಷಯ ಕಾಲೋನಿ ಮನೆಯಲ್ಲಿ ಚಿನ್ನದ ರಾಶಿ..? ಗೋಲ್ಡ್ ಸ್ಮಿತ್ ಕರೆಸಿ ತೂಕ ಹಾಕಿಸಿದ ಲೋಕಾಯುಕ್ತರು..!

ಹುಬ್ಬಳ್ಳಿಯಲ್ಲಿ ಏಕಕಾಲಕ್ಕೆ ನಾಲ್ಕು ಕಡೆ ಲೋಕಾಯುಕ್ತ ದಾಳಿ..!

ಹುಬ್ಬಳ್ಳಿ: ಬೆಳ್ಳಂಬೆಳಗ್ಗೆ ಹುಬ್ಬಳ್ಳಿಯಲ್ಲಿ ಲೋಕಾಯುಕ್ತ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಹೆಸ್ಕಾಂನ ಎಇಇ ದಂಪತಿಗೆ ಸಂಬಂಧಿಸಿದ ಮನೆ ಹಾಗೂ ಕಚೇರಿ ಸೇರಿದಂತೆ ಏಕಕಾಲಕ್ಕೆ ನಾಲ್ಕು ಕಡೆ ದಾಳಿ ನಡೆಸಿದ್ದಾರೆ ಎನ್ನಲಾಗಿದೆ….

ಹೆಸ್ಕಾಂನಲ್ಲಿ ಎಇಇ ಆಗಿ ಕಾರ್ಯನಿರ್ವಹಿಸುತ್ತಿರುವ ಕಿರಣಕುಮಾರ ಬೈಂದೂರ ಹಾಗೂ ಅವರ ಪತ್ನಿ ಪ್ರೀತಿ ಅವರಿಗೆ ಸಂಬಂಧಿಸಿದ ಕಚೇರಿ ಹಾಗೂ ಮನೆಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ…

ದಾಳಿ ವೇಳೆ ಮನೆಯಲ್ಲಿ ಅಪಾರ ಪ್ರಮಾಣದ ನಗದು, ಚಿನ್ನ, ಬೆಳ್ಳಿ ಹಾಗೂ ವಿವಿಧ ದಾಖಲೆಗಳು ಪತ್ತೆಯಾಗಿವೆ ಎನ್ನಲಾಗಿದೆ…

ಇನ್ನು ಅಕ್ಷಯ ಕಾಲೋನಿಯಲ್ಲಿರುವ ಮನೆಯಲ್ಲಿ ಹೆಚ್ಚಿನ ಪ್ರಮಾಣದ ಚಿನ್ನ ಪತ್ತೆಯಾದ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಗೋಲ್ಡ್ ಸ್ಮಿತ್‌ರನ್ನು ಸ್ಥಳಕ್ಕೆ ಕರೆಸಿ ಚಿನ್ನದ ತೂಕ ಹಾಗೂ ಮೌಲ್ಯ ಲೆಕ್ಕಾಚಾರ ನಡೆಸುತ್ತಿದ್ದಾರೆ…

ಸದ್ಯ ನಾಲ್ಕೂ ಕಡೆ ಲೋಕಾಯುಕ್ತ ಅಧಿಕಾರಿಗಳ ಪರಿಶೀಲನೆ ಮುಂದುವರಿದಿದ್ದು, ದಾಳಿಯಲ್ಲಿ ಎಷ್ಟು ಪ್ರಮಾಣದ ನಗದು, ಚಿನ್ನಾಭರಣ ಹಾಗೂ ಆಸ್ತಿ ದಾಖಲೆಗಳು ಪತ್ತೆಯಾಗಿವೆ ಎಂಬುದು ಅಧಿಕಾರಿಗಳ ಅಧಿಕೃತ ಮಾಹಿತಿ ಬಳಿಕವಷ್ಟೇ ಸ್ಪಷ್ಟವಾಗಲಿದೆ….

Share News

About Shaikh BigTv

Check Also

ಪಿಎಸ್‌ಐ ಜೊತೆ ಮಾತಿನ ಚಕಮಕಿ ಪ್ರಕರಣ: ಐಶ್ವರ್ಯಗೌಡರಿಂದ ಬೇಷರತ್ ಕ್ಷಮೆಯಾಚನೆ

ಮಂಡ್ಯ ಜಿಲ್ಲೆಯ ಪಾಂಡವಪುರದ ಉಕ್ಕಡ ಮಾರಮ್ಮ ದೇವಸ್ಥಾನದಲ್ಲಿ ಕರ್ತವ್ಯದಲ್ಲಿದ್ದ ಮಹಿಳಾ ಪಿಎಸ್‌ಐ ಸವಿತಾ ಪಾಟೀಲ್ ಅವರೊಂದಿಗೆ ನಡೆದ ಮಾತಿನ ಚಕಮಕಿಗೆ …

Leave a Reply

Your email address will not be published. Required fields are marked *