Breaking News

ಪೋಲಿಸ್ ಅಧಿಕಾರಿಗಳು ಅಮಾನತು: ಆರೋಪಿಯ ಅಣ್ಣನಿಗೆ ಹಿಂಸೆ ಆರೋಪ

ಕಾಸರಗೋಡು: ಶಾಸ್ತಾಂಕೋಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೋಕ್ಸೋ ಪ್ರಕರಣದ ಆರೋಪಿಯ ಅಣ್ಣನನ್ನು ಅಪಹರಿಸಿ ಹಲ್ಲೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಬೇಕಲ್ ಠಾಣೆಯ ಪಿಎಸ್‌ಐ ಕೆ. ಶರತ್ ಸೇರಿದಂತೆ ಮೂವರು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಮೇ 29ರಂದು ಪೋಕ್ಸೋ ಪ್ರಕರಣದ ಆರೋಪಿ ಅಭಿಷೇಕ್‌ನನ್ನು ಬಂಧಿಸಲು ಪೊಲೀಸರು ಆತನ ಮನೆಗೆ ತೆರಳಿದ್ದರು. ಆತ ಮನೆಯಲ್ಲಿ ಇಲ್ಲದಿದ್ದಾಗ ಅಣ್ಣ ಅಭಿಜಿತ್‌ನನ್ನು ಬಲವಂತವಾಗಿ ಕರೆದೊಯ್ದು, ವಾಹನದಲ್ಲಿ ಸುತ್ತಾಡಿಸಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆ ಕುರಿತು ಅಭಿಜಿತ್ ನೀಡಿದ ದೂರಿನ ಆಧಾರದ ಮೇಲೆ ತನಿಖೆ ನಡೆಸಿದ ಬಳಿಕ ಪತ್ತನಂತಿಟ್ಟ ಜಿಲ್ಲಾ ಪೊಲೀಸ್ ಮುಖ್ಯಸ್ಥರ ಪ್ರಾಥಮಿಕ ವರದಿ ಆಧರಿಸಿ ಅಮಾನತು ಆದೇಶ ಹೊರಡಿಸಲಾಗಿದೆ. ಸೂರನಾಡ್ ಠಾಣೆಯ ಗ್ರೇಡ್ ಎಸ್‌ಐ ಶ್ರೀಕುಮಾರ್ ಹಾಗೂ ಶಾಸ್ತಾಂಕೋಟ ಠಾಣೆಯ ಸಿವಿಲ್ ಪೊಲೀಸ್ ಅಧಿಕಾರಿ ವಿಪಿನ್ ಕುಮಾರ್ ಕೂಡ ಅಮಾನತುಗೊಂಡಿದ್ದಾರೆ.

Share News

About BigTv News

Check Also

ಪತಿ ಬಟ್ಟೆಯಲ್ಲಿದ್ದ ‘ಬಾರ್‌ ಕೋಡ್‌’ ಕೊಟ್ಟ ಸುಳಿವು!

ಬೆಂಗಳೂರು: ಪತ್ನಿಯನ್ನು ಕೊಲೆ ಮಾಡಿ ಮೃತದೇಹವನ್ನು ಎಂ.ಎಸ್. ನಗರ ಅಗ್ರಹಾರ ಲೇಔಟ್‌ನ ಖಾಲಿ ನಿವೇಶನದಲ್ಲಿ ಎಸೆದಿದ್ದ ಆರೋಪದ ಮೇಲೆ ಸಂಪಿಗೆಹಳ್ಳಿ …

Leave a Reply

Your email address will not be published. Required fields are marked *