Breaking News

ಕಲಬುರಗಿ: ಲೋಕಾಯುಕ್ತ ಬಲೆಗೆ ಬಿದ್ದ ಪೊಲೀಸ್ ಪೇದೆ

ಕಲಬುರಗಿ: ನ್ಯಾಯಾಲಯದ ಸೂಚನೆಯಂತೆ ಪ್ರತಿ ತಿಂಗಳು ಠಾಣಾಧಿಕಾರಿ ಮುಂದೆ ಹಾಜರಾಗಬೇಕಿದ್ದ ವ್ಯಕ್ತಿಗೆ ಪ್ರತಿ ಭಾನುವಾರ ಠಾಣೆಗೆ ಬರುವಂತೆ ಸತಾಯಿಸಿ, ಬೇಲ್ ರದ್ದುಪಡಿಸಿ ಜೈಲಿಗೆ ಕಳುಹಿಸುವುದಾಗಿ ಬೆದರಿಸಿ ₹3 ಸಾವಿರ ಲಂಚ ಪಡೆದ ಆರೋಪದ ಮೇಲೆ ಸುಲೇಪೇಟ್ ಠಾಣೆಯ ರೈಟರ್ ಅನಿಲಕುಮಾರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಚಿಂಚೋಳಿ ತಾಲೂಕಿನ ಗಡಿಕೇಶ್ವಾರದ ಚಂದ್ರಶೇಖರ ರಂಗನೂರ ಅವರು ನೀಡಿದ ದೂರಿನ ಆಧಾರದ ಮೇಲೆ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಅನಿಲಕುಮಾರ್, ಮಧ್ಯವರ್ತಿ ಕೃಷ್ಣ ಎಂಬಾತನ ಮೂಲಕ ಫೋನ್‌ಪೇನಲ್ಲಿ ₹3 ಸಾವಿರ ಲಂಚದ ಹಣ ವರ್ಗಾವಣೆ ಮಾಡಿಸಿಕೊಂಡಿದ್ದ ಎನ್ನಲಾಗಿದೆ. ದಾಳಿ ವೇಳೆ ಅನಿಲಕುಮಾರ್ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ. ಲೋಕಾಯುಕ್ತ ಇನ್ಸ್‌ಪೆಕ್ಟರ್ ರವಿಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.

Share News

About BigTv News

Check Also

ಬರೋಬ್ಬರಿ 1 ಕೋಟಿ ರೂ.ಗೆ ರೆಡ್ ಸ್ಯಾಂಡ್ ಬೋವಾ ಮಾರಲು ಯತ್ನಿಸಿದವ ಸಿಸಿಬಿ ಬಲೆಗೆ..!

ಬೆಂಗಳೂರು: ಅಪರೂಪದ ‘ರೆಡ್ ಸ್ಯಾಂಡ್ ಬೋವಾ’ ಹಾವು ಹಾಗೂ ಕೋರಲ್ ಸೀ ಫ್ಯಾನ್‌ಗಳನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸಿದ ಎರಡು …

Leave a Reply

Your email address will not be published. Required fields are marked *