Breaking News

ಮಣಿಪಾಲ| ಮೊಬಿಲಿಟಿ ಕಂಪೆನಿಗೆ ವಂಚನೆ ಪ್ರಕರಣ: ಆರು ಮಂದಿ ಆರೋಪಿಗಳ ಬಂಧನ

ಮಣಿಪಾಲ: ಮಣಿಪಾಲ ಎಂಐಟಿ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಬ್ಯಾಟರಿ ಚಾಲಿತ ವಾಹನ ಸೇವೆ ನೀಡುವ ಇಂಡಿಯಾಂಟಾ ಇ-ಮೊಬಿಲಿಟಿ ಕಂಪನಿಗೆ ₹12 ಲಕ್ಷ ವಂಚಿಸಿದ ಆರೋಪದ ಮೇಲೆ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಆರೋಪಿಗಳು ಪ್ರಯಾಣಿಕರಿಂದ ಶುಲ್ಕ ಸಂಗ್ರಹಿಸುವಾಗ ಕಂಪನಿಯ ಕ್ಯೂಆರ್ ಕೋಡ್ ಬದಲಿಗೆ ವೈಯಕ್ತಿಕ ಮರ್ಚೆಂಟ್ ಕ್ಯೂಆರ್ ಕೋಡ್ ಬಳಸಿದ್ದರು. ಬಳಿಕ ಸಂಗ್ರಹಿಸಿದ ಹಣವನ್ನು ಮುತ್ತಣ್ಣ ಅಢೀನವರ ಅವರ ಪತ್ನಿ ಐಶ್ವರ್ಯ ಮುತ್ತಣ್ಣ ಅವರ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಂಡು ವಂಚನೆ ಎಸಗಿರುವುದಾಗಿ ದೂರಲಾಗಿದೆ. ವಿಜಯನಗರದ ಸಿದ್ದಮೂರ್ತಿ ಜಿ., ಆತ್ರಾಡಿಯ ಶಿವರಾಜ್ ನಾಯ್ಕ, ಚಿತ್ರದುರ್ಗದ ಸುದೀಪ್, ಮಂಜೇಶ್ವರದ ಜಿತೇಶ ಕಾಂಚನ್, ಬೆಳಗಾವಿಯ ಮುತ್ತಣ್ಣ ಅಢೀನವರ ಹಾಗೂ ಬೆಳ್ತಂಗಡಿಯ ಎಂ.ಬಿ. ಅವಿನಾಶ್ ಬಂಧಿತರು. ಅ.2ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ತನಿಖೆಗಾಗಿ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ.

Share News

About BigTv News

Check Also

ಬರೋಬ್ಬರಿ 1 ಕೋಟಿ ರೂ.ಗೆ ರೆಡ್ ಸ್ಯಾಂಡ್ ಬೋವಾ ಮಾರಲು ಯತ್ನಿಸಿದವ ಸಿಸಿಬಿ ಬಲೆಗೆ..!

ಬೆಂಗಳೂರು: ಅಪರೂಪದ ‘ರೆಡ್ ಸ್ಯಾಂಡ್ ಬೋವಾ’ ಹಾವು ಹಾಗೂ ಕೋರಲ್ ಸೀ ಫ್ಯಾನ್‌ಗಳನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸಿದ ಎರಡು …

Leave a Reply

Your email address will not be published. Required fields are marked *