Breaking News

ಲಕ್ಷಾಂತರ ಸಾರಿಗೆ ನೌಕರರ ಪಿಎಫ್ ಹಣಕ್ಕೆ ಕನ್ನ; ಡ್ರೈವರ್, ಕಂಡಕ್ಟರ್​ಗಳ ಖಾತೆಗೆ ಜಮಾ ಆಗದ 2,500 ಕೋಟಿ ರೂ.!

ಬೆಂಗಳೂರು: ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ಸುಮಾರು 1.10 ಲಕ್ಷ ನೌಕರರ ₹2,500 ಕೋಟಿ ಪಿಎಫ್ ಹಣ ದುರ್ಬಳಕೆಯಾಗಿದೆ ಎಂಬ ಆರೋಪ ಕೇಳಿಬಂದಿದೆ. ನೌಕರರ ಭವಿಷ್ಯಕ್ಕಾಗಿ ಮೀಸಲಿಟ್ಟ ಹಣವನ್ನು ನಿಗಮಗಳು ಇತರೆ ಖರ್ಚುಗಳಿಗೆ ಬಳಸಿಕೊಂಡಿವೆ ಎನ್ನಲಾಗಿದೆ. ಬಿಎಂಟಿಸಿಯಲ್ಲಿ ₹1,000 ಕೋಟಿ ಹಾಗೂ ಉಳಿದ ಮೂರು ಸಾರಿಗೆ ನಿಗಮಗಳಲ್ಲಿ ₹1,500 ಕೋಟಿ ಪಿಎಫ್ ಹಣ ಬಾಕಿಯಿದೆ ಎಂದು ವರದಿಯಾಗಿದೆ. ಈ ಹಣವನ್ನು ಡೀಸೆಲ್ ಖರೀದಿ ಹಾಗೂ ವೇತನ ಪಾವತಿಗೆ ಬಳಸಿಕೊಂಡಿರುವ ಆರೋಪ ವ್ಯಕ್ತವಾಗಿದೆ. ಪಿಎಫ್ ಹಣ ಹಿಂಪಡೆಯಲು ಅರ್ಜಿ ಸಲ್ಲಿಸಿದ ನೌಕರರಿಗೆ ಹಣ ಸಿಗದೆ ಆರ್ಥಿಕ ಸಂಕಷ್ಟ ಎದುರಾಗಿದೆ. ಮಗಳ ಮದುವೆ, ಮಕ್ಕಳ ಶಾಲಾ ಶುಲ್ಕ ಹಾಗೂ ವೈದ್ಯಕೀಯ ವೆಚ್ಚಗಳಿಗೆ ತಮ್ಮದೇ ಹಣ ಪಡೆಯಲು ಪರದಾಡುತ್ತಿರುವ ನೌಕರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share News

About BigTv News

Check Also

ಬುದ್ಧಿಮಾಂದ್ಯ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಕಾಮುಕನಿಗೆ 20 ವರ್ಷ ಜೈಲು!

ರಾಮನಗರ: ವಿಶೇಷಚೇತನ ಬಾಲಕಿಯ ಮೇಲೆ ಅತ್ಯಾಚಾರವೆಸಗಿ, ಕೃತ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದ ಇಬ್ಬರು ಆರೋಪಿಗಳಿಗೆ ಬೆಂಗಳೂರು ದಕ್ಷಿಣ ಜಿಲ್ಲೆಯ 1ನೇ ಅಪರ …

Leave a Reply

Your email address will not be published. Required fields are marked *