Breaking News

ಬೈಕ್ ಸವಾರನ ನಿರ್ಲಕ್ಷ್ಯದಿಂದ ಅಪಘಾತ: ಅಕ್ಟಿವಾ ಮೊಪೆಡ್‌ಗೆ ಗುದ್ದಿದ ಸ್ಕಾರ್ಪಿಯೋ ಕಾರು!!

ತಿಪ್ಪೇನಹಳ್ಳಿ ಗ್ರಾಮದ ನಾರಾಯಸ್ವಾಮಿ ಮತ್ತು ಅವರ ಧರ್ಮಪತ್ನಿ ಸ್ಕಾರ್ಪಿಯೋ ಕಾರಲ್ಲಿ ನಾಮಕರಣ ಕಾರ್ಯಕ್ರಮಕ್ಕೆಂದು ಶಿಡ್ಲಘಟ್ಟದ ಕಡೆ ಹೋಗುತ್ತಿದ್ದರು. ಇದೇ ಮಾರ್ಗದಲ್ಲಿ ಹೋಗುತ್ತಿದ್ದ ಬೈಕ್ ಸವಾರ ಯಾವ ಸಿಗ್ನಲ್ ನೀಡದೆ ಏಕಾಏಕಿ ಎಡದಿಂದ ಬಲಕ್ಕೆ ವಾಹನವನ್ನು ತಿರುಗಿಸಿದ್ದಾರೆ. ದ್ವಿಚಕ್ರ ವಾಹನದ ಹಿಂದೆಯೇ ಇದ್ದ ಸ್ಕಾರ್ಪಿಯೋ ಕಾರು ಬೈಕ್ ಸವಾರನನ್ನು ತಪ್ಪಿಸಲು ಹೋಗಿ ಚಿಕ್ಕಬಳ್ಳಾಪುರದತ್ತ ಬರುತ್ತಿದ್ದ ಹೋಂಡಾ ಆಕ್ಟಿವಾ ಗಾಡಿಗೆ ಮುಖಾಮುಖಿ ಡಿಕ್ಕಿಯಾಗಿದೆ. ಪರಿಣಾಮ ಗಾಡಿ ಜಕಂ ಆಗಿದ್ದರೆ ಬೈಕ್ ಸವಾರ ಕಾರಿನ ಕೆಳಗೆ ಸಕ್ಕಿಕೊಂಡಿದ್ದರಿಂದ ತೀವ್ರ ಸ್ವರೂಪದ ಗಾಯಗಳಾಗಿ ಆಸ್ಪತ್ರೆ ಪಾಲಾಗುವಂತೆ ಆಗಿದೆ.ಅಪಘಾತವಾದ ಕೂಡಲೇ ರಸ್ತೆಯಲ್ಲಿ ಗಾಡಿಗಳು ನಿಂತು ಜನಜಂಗುಳಿ ಏರ್ಪಟ್ಟರೂ ಒಬ್ಬೇ ಒಬ್ಬ ಪೊಲೀಸ್ ಕೂಡ ಬಂದು ಘಟನೆಯ ಮಾಹಿತಿ ಪಡೆಯಲಿಲ್ಲ ಎಂಬುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು.

Share News

About BigTv News

Check Also

ಬೆಳಗಾವಿಯಲ್ಲಿ ‘ಕರ್ನಾಟಕ ಬಂದ್’ಗೆ ಅಭೂತಪೂರ್ವ ಬೆಂಬಲ : ಧಾರವಾಡದಲ್ಲಿ ನಿಷೇಧಾಜ್ಞೆ ಜಾರಿ

ಬೆಳಗಾವಿ/ಧಾರವಾಡ: ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ರೈತರು ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಉತ್ತರ ಕರ್ನಾಟಕದಾದ್ಯಂತ ವ್ಯಾಪಕ ಬೆಂಬಲ …

Leave a Reply

Your email address will not be published. Required fields are marked *