ಹುಬ್ಬಳ್ಳಿ: ತಂದೆ ತಾಯಿ ಕಿತ್ತಾಟದ ನಡುವೆ ಕೂಸು ಬಲಿಯಾದಂತೆ, ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವೆ, ನಮ್ಮ ಉತ್ತರ ಕರ್ನಾಟಕ ರೈತರು ಬಲಿಯಾಗುತ್ತಿದ್ದಾರೆ. ಉತ್ತರ ಕರ್ನಾಟಕ ಭಾಗದ ಬಹುದಿನಗಳ ಬೇಡಿಕೆಯಾಗಿರುವ ಮಹದಾಯಿ, ಕಳಸಾ ಬಂಡೂರಿ ಯೋಜನೆಯನ್ನು ಕೇಂದ್ರ ಸರ್ಕಾರ ಅನುಷ್ಠಾನಗೊಳಿಸಲು ಹಿಂಜರಿಯುತ್ತಿರುವುದರಿಂದ ರೈತ ಸಂಘಟನೆಗಳು ಪತ್ರ ಚಳುವಳಿ ಮಾಡಲು ಮುಂದಾಗಿದ್ದಾರೆ.
ಕಳೆದ ಹಲವಾರು ವರ್ಷಗಳಿಂದ ಮಹದಾಯಿಗಾಗಿ ಉತ್ತರ ಕರ್ನಾಟಕದ ರೈತರು ಹೋರಾಟ ಮಾಡ್ತಾ ಬಂದಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಲ್ಲ ಕಾನೂನು ತೊಡಕು ನಿವಾರಿಸಿ ಯೋಜನೆ ಜಾರಿಗೊಳಿಸಲು ಹಿಂಜರಿಯುತ್ತಿದ್ದಾರೆ. ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಮಳೆಯಾಗದೆ ರೈತರು ಸಮಸ್ಯೆ ಎದುರಿಸುತ್ತಿದ್ದಾರೆ. ಜನ, ಜಾನುವಾರುಗಳು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಇದುವರೆಗೂ ರೈತರು ಮುಂಗಾರು ಬಿತ್ತನೆ ಮಾಡಿಲ್ಲ. ಸಂಪೂರ್ಣ ಬರಗಾಲ ಆವರಿಸಿದೆ. ಜನಜಾನುವಾರುಗಳು ಕುಡಿಯುವ ನೀರಿನಿಂದ ಹಾಹಾಕಾರ ಪಡುತ್ತಿದ್ದು ಕೂಡಲೇ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಮಹದಾಯಿ ಯೋಜನೆ ಜಾರಿಗೆ ಮುಂದಾಗಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡಲಾಗುತ್ತದೆಂದು ಎಚ್ಚರಿಕೆ ನೀಡಿದರು.
ಈಗಾಗಲೇ ಮಹದಾಯಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಜೆ.ಎಸ್. ಪಾಂಚಾಲ್ ನೇತೃತ್ವದ ನ್ಯಾಯಮಂಡಳಿ ತೀರ್ಪು ನೀಡಾಗಿದೆ. ಕರ್ನಾಟಕಕ್ಕೆ ಒಟ್ಟು 13. 7 ಟಿಎಂಸಿ ನೀರು ಹಂಚಿಕೆ ಮಾಡಿದ್ದು ಇದು ಕಾಮಗಾರಿ ಆಗ್ತಾ ಇಲ್ಲ. ಮಹದಾಯಿ ಜಲವಿವಾದ ನ್ಯಾಯಮಂಡಳಿಯು ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳಿಗೆ ಸೇರಬೇಕಾದ ನೀರನ್ನು ಹಂಚಿಕೆ ಮಾಡಿದ್ದು, ಆದ್ರೆ ಕಾಮಗಾರಿ ಮಾತ್ರ ಆರಂಭ ಮಾಡುತ್ತಿಲ್ಲ. ಈ ಬಗ್ಗೆ ಕಳಸಾ ಬಂಡೂರಿ ಹೋರಾಟ ಮಾಡ್ತಾ ಬಂದ ನವಲಗುಂದ ಶಾಸಕ ಎನ್.ಹೆಚ್ ಕೋನರೆಡ್ಡಿ ಏನು ಹೇಳ್ತಾರೆ ಕೇಳಿ.
ಒಟ್ನಲ್ಲಿ ಹೇಳಬೇಕೆಂದ್ರೆ ಕಳಸಾ ಬಂಡೂರಿ ಸಲುವಾಗಿ ಎಷ್ಟೋ ರೈತರು ಹೋರಾಟ ಮಾಡ್ತಾ ಬಂದು ತಮ್ಮ ಜೀವನವನ್ನು ಕಳೆದುಕೊಂಡಿದ್ದಾರೆ. ರಾಜ್ಯ ಸರ್ಕಾರ ಕೇಂದ್ರಕ್ಕೆ ಎಷ್ಟೋ ಮನವಿ ಮಾಡ್ತಿದ್ರು ಇದುವರೆಗೂ ಅನುಮತಿ ಸಿಗ್ತಿಲ್ಲಾ. ಇದುವರೆಗೆ ಯಾವುದೇ ರೀತಿಯ ಯೋಜನೆ ಬಗ್ಗೆ ಉಭಯ ಸರ್ಕಾರ ಗಮನ ಹರಿಸ್ತಾ ಇಲ್ಲ. ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ರೈತ ಸಂಘಟನೆಗಳು ಎಚ್ಚರಿಕೆ ನೀಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





