Breaking News

ಅಕ್ರಮವಾಗಿ 150 ನಾಡಬಾಂಬ್‌ ಸಂಗ್ರಹ, ಬಟ್ಲಹಳ್ಳಿಯಲ್ಲಿ ಓರ್ವನ ಬಂಧನ!

ಚಿಕ್ಕಬಳ್ಳಾಪುರ: ಚಿಂತಾಮಣಿ ತಾಲ್ಲೂಕಿನ ಬಟ್ಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರು ದಾಳಿ ನಡೆಸಿ 150ಕ್ಕೂ ಹೆಚ್ಚು ನಾಡಬಾಂಬ್‌ಗಳು ಹಾಗೂ ಒಂದು ನಾಡಬಂದೂಕನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ 35 ವರ್ಷದ ನರಸಿಂಹಪ್ಪ ಎಂಬಾತನನ್ನು ಬಂಧಿಸಲಾಗಿದೆ. ಅಕ್ರಮವಾಗಿ ಸ್ಫೋಟಕಗಳನ್ನು ಸಂಗ್ರಹಿಸಿಟ್ಟಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಕಾರ್ಯಾಚರಣೆ ನಡೆಸಿ ಬಾಂಬ್‌ಗಳು ಹಾಗೂ ಬಂದೂಕನ್ನು ಜಪ್ತಿ ಮಾಡಿದ್ದಾರೆ. ನಾಡಬಾಂಬ್‌ಗಳು ಮತ್ತು ಬಂದೂಕನ್ನು ಯಾವ ಉದ್ದೇಶಕ್ಕಾಗಿ ಸಂಗ್ರಹಿಸಿಡಲಾಗಿತ್ತು ಎಂಬ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಈ ಸಂಬಂಧ ಬಟ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.

Share News

About BigTv News

Check Also

300 ರೂ. ಮೆಡಿಸಿನ್ 6 ಸಾವಿರಕ್ಕೆ ಸೇಲ್: ಸೈಲೆಂಟ್ ಆಗಿ ನಡೀತಿದ್ದ ನಕಲಿ ಆಂಟಿಬಯೋಟಿಕ್ ದಂಧೆ; SIT ತನಿಖೆಯಲ್ಲಿ ಸ್ಫೋಟಕ ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಸಂಚಲನ ಸೃಷ್ಟಿಸಿರುವ ನಕಲಿ ಔಷಧ ಜಾಲದ ಪ್ರಕರಣದಲ್ಲಿ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ₹200ರಿಂದ ₹300 ಬೆಲೆಯ ಆಂಟಿಬಯೋಟಿಕ್ …

Leave a Reply

Your email address will not be published. Required fields are marked *