Breaking News

ಕಾಂಗ್ರೆಸ್ ಕೈ ಕೊಟ್ಟು ಮತ್ತೆ ಬಿಜೆಪಿ ಕೈಹಿಡಿದಿದ್ದಾನೆ ಮತದಾರ ಪ್ರಭು….

2024ರ ಲೋಕಸಭೆ ಚುನಾವಣೆ ಬಿಜೆಪಿ ಪಕ್ಷಕ್ಕೆ ಮತ್ತೊಮ್ಮೆ ಭರ್ಜರಿ ಜಯ ತಂದುಕೊಡಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಹ್ಯಾಟ್ರಿಕ್ ಬಾರಿಸಲಿದೆ. ಅಷ್ಟಕ್ಕು ಈ ಮಾತು ಹೇಳುತ್ತಿದ್ದ ಬಿಜೆಪಿ ಬೆಂಬಲಿಗರಿಗೆ ಹಾಗೂ ನಾಯಕರಿಗೆ ಇಂದು ಸಿಹಿಸುದ್ದಿ ಸಿಕ್ಕುಬಿಟ್ಟಿದೆ. ಪಂಚರಾಜ್ಯ ಚುನಾವಣೆ ಅಖಾಡದಲ್ಲಿ ಸಮೀಕ್ಷೆಗಳ ಫಲಿತಾಂಶ ಸುಳ್ಳಾಗಿದ್ದು, ಕಾಂಗ್ರೆಸ್ ಕೈ ಕೊಟ್ಟು ಮತ್ತೆ ಬಿಜೆಪಿ ಕೈಹಿಡಿದಿದ್ದಾನೆ ಮತದಾರ ಪ್ರಭು!

ಛತ್ತೀಸ್‌ಗಢ, ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ, ಮಿಜೋರಾಂ ಎಲೆಕ್ಷನ್ ನಡೆದಿದ್ದು ಇಂದು 4 ರಾಜ್ಯಗಳ ಫಲಿತಾಂಶ ಹೊರಬಿದ್ದಿದೆ. ಹೀಗೆ ಹೊರಬಿದ್ದಿರುವ 4 ರಾಜ್ಯದ ರಿಸಲ್ಟ್ ಪೈಕಿ ಈಗಾಗಲೇ ರಾಜಸ್ಥಾನ ಮತ್ತು ಮಧ್ಯಪ್ರದೇಶ ರಾಜ್ಯದಲ್ಲಿ ಬಿಜೆಪಿ ಭರ್ಜರಿ ಗೆಲುವನ್ನು ಕಂಡಿದೆ. ಹಾಗೇ ಛತ್ತೀಸ್‌ಗಢ ಅಖಾಡದಲ್ಲೂ ಕಾಂಗ್ರೆಸ್‌ಗೆ ಸೋಲು ಕರುಣಿಸುತ್ತಿದೆ ಬಿಜೆಪಿ. ಈ ಸಮಯದಲ್ಲೇ ಸೋಲಿನ ಪರಿಣಾಮ, ಕಾಂಗ್ರೆಸ್ ನಾಯಕರು ಕೈ-ಕೈ ಹಿಸುಕಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.

Share News

About BigTv News

Check Also

Featured Video Play Icon

ಹುಬ್ಬಳ್ಳಿ : ಹಿಂದೂ ವಿಧಿವಿಧಾನಗಳ ಪ್ರಕಾರ ಅಂತ್ಯಕ್ರಿಯೆ: ತಹಶೀಲ್ದಾರ ಕಲಗೌಡ ಪಾಟೀಲ..!

ಹುಬ್ಬಳ್ಳಿ: ಐದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದ ಹಂತಕ ರಿತೇಶಕುಮಾರ್ ಮೃತ ದೇಹವನ್ನು ಹಿಂದೂ ವಿಧಿವಿಧಾನಗಳ …

Leave a Reply

Your email address will not be published. Required fields are marked *