Breaking News

ರೈತನಿಗೆ ಮದ್ಯ ಕುಡಿಸಿ ಮನಸೋ ಇಚ್ಛೆ ಹಲ್ಲೆ, ₹15000 ಲಂಚಕ್ಕೆ ಬೇಡಿಕೆ?: ಅರಣ್ಯ ಸಿಬ್ಬಂದಿ ವಿರುದ್ಧ ಗಂಭೀರ ಆರೋಪ!

ರಾಯಚೂರು: ಜಮೀನಿನಲ್ಲಿ ಸಸಿ ನೆಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ರೈತನ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ಹಲ್ಲೆ ನಡೆಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಮಸ್ಕಿ ತಾಲ್ಲೂಕಿನ ಯರದೊಡ್ಡಿ ಗ್ರಾಮದ ರೈತ ರಮೇಶ್ ಹಲ್ಲೆಗೊಳಗಾಗಿದ್ದು, ಬೆನ್ನಿನ ಮೇಲೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಮೇಶ್ ಅವರ ಜಮೀನಿನಲ್ಲಿ ದಾಳಿಂಬೆ ಗಿಡಗಳ ಬಳಿ ಅರಣ್ಯ ಸಿಬ್ಬಂದಿ ಸಸಿ ನೆಡಲು ಮುಂದಾಗಿದ್ದರು. ಈ ವೇಳೆ ಜಮೀನಿನ ಹೊರಭಾಗದಲ್ಲಿ ಸಸಿ ನೆಡುವಂತೆ ರೈತ ಆಕ್ಷೇಪ ವ್ಯಕ್ತಪಡಿಸಿದ್ದರು. ಇದರಿಂದ ಕೋಪಗೊಂಡ ಸಿಬ್ಬಂದಿ, ರೈತನನ್ನು ಬಲವಂತವಾಗಿ ಬೈಕ್‌ನಲ್ಲಿ ಕರೆದೊಯ್ದು ಮಾರ್ಗಮಧ್ಯೆ ಹಾಗೂ ಲಿಂಗಸೂಗೂರು ಅರಣ್ಯ ಇಲಾಖೆ ಕಚೇರಿಯಲ್ಲಿ ಮದ್ಯ ಕುಡಿಸಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ, ರೈತನ ಕುಟುಂಬಕ್ಕೆ ಕರೆ ಮಾಡಿ ₹15 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಹಲ್ಲೆಯಿಂದ ಗಾಯಗೊಂಡ ರಮೇಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಘಟನೆಗೆ ಸಂಬಂಧಿಸಿದಂತೆ ಆರೋಪಗಳ ಕುರಿತು ತನಿಖೆ ನಡೆಸಬೇಕಿದೆ.

Share News

About BigTv News

Check Also

300 ರೂ. ಮೆಡಿಸಿನ್ 6 ಸಾವಿರಕ್ಕೆ ಸೇಲ್: ಸೈಲೆಂಟ್ ಆಗಿ ನಡೀತಿದ್ದ ನಕಲಿ ಆಂಟಿಬಯೋಟಿಕ್ ದಂಧೆ; SIT ತನಿಖೆಯಲ್ಲಿ ಸ್ಫೋಟಕ ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಸಂಚಲನ ಸೃಷ್ಟಿಸಿರುವ ನಕಲಿ ಔಷಧ ಜಾಲದ ಪ್ರಕರಣದಲ್ಲಿ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ₹200ರಿಂದ ₹300 ಬೆಲೆಯ ಆಂಟಿಬಯೋಟಿಕ್ …

Leave a Reply

Your email address will not be published. Required fields are marked *