ಉಡುಪಿ: ಚೂಡಿ ಪೂಜೆ ವೇಳೆ ಸೀರೆಗೆ ಬೆಂಕಿ ತಗಲಿ ಮಹಿಳೆ ಯೊಬ್ಬರು ಮೃತಪಟ್ಟ ಘಟನೆ ಕಿನ್ನಿಮುಲ್ಕಿಯ ವೇಗಸ್ ಟೌನ್‌ಶಿಪ್‌ನಲ್ಲಿ ನಡೆದಿದೆ. ಮೃತರನ್ನು ವೇಗಸ್ ಟೌನ್‌ಶಿಪ್‌ನ ಪದ್ಮನಾಭ ಮಲ್ಯ ಎಂಬವರ ಪತ್ನಿ ಜಯಂತಿ ಮಲ್ಯ(80) ಎಂದು ಗುರುತಿಸಲಾ ಗಿದೆ. ಇವರು ಆ.16ರಂದು ಮನೆಯಲ್ಲಿ ಶ್ರಾವಣ ಮಾಸದ ಚೂಡಿ ಪೂಜೆಯನ್ನು ತುಳಿಸಿಕಟ್ಟೆಯಲ್ಲಿ ಮಾಡುತ್ತಿರುವಾಗ ಆಕಸ್ಮಿಕವಾಗಿ ಸೀರೆಗೆ ಬೆಂಕಿ ತಾಗಿತ್ತೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಅವರು, ಸೆ.1ರಂದು ಸಂಜೆ ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟರು ಎಂದು ತಿಳಿದು ಬಂದಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

