PA-31T1 ವಿಮಾನ ರನ್ವೇನಿಂದ ಮೇಲಕ್ಕೆ ಹಾರಿದ ಬೆನ್ನಲ್ಲೇ ನಿಯಂತ್ರಣ ಕಳೆದುಕೊಂಡಿದೆ. ಪರಿಣಾಮ ಕೆಲವೇ ಕ್ಷಣದಲ್ಲಿ ವಿಮಾನ ಪತನಗೊಂಡಿದೆ.ವಿಮಾನ ನಿಲ್ದಾಣದ ಕೆಲ ದೂರದಲ್ಲಿ ನಿಂತಿರುವ ಹಲವರು ವಿಮಾನ ಟೇಕ್ ಆಫ್ ವಿಡಿಯೋ ಸೆರೆ ಹಿಡಿದ್ದಾರೆ. ಆದರೆ ಈ ವಿಮಾನ ಈ ರೀತಿ ಪತನಗೊಳ್ಳಲಿದೆ ಅನ್ನೋದು ಊಹಿಸಿರಲಿಲ್ಲ. ವಿಮಾನ ನೇರವಾಗಿ ದೂರದಲ್ಲಿ ನಿಂತಿದ್ದವರತ್ತ ತಿರುಗಿದೆ. ಈ ವೇಳೆ ಹಲವರು ಚೀರಾಡಿದ್ದಾರೆ. ಕೆಲವೇ ಕ್ಷಣದಲ್ಲಿ ವಿಮಾನವೇ ಭಸ್ಮವಾಗಿದೆ. ಸಿವಿಲ್ ಏರೋನಾಟಿಕ್ಸ್ ವಿಮಾನ ನಿಲ್ದಾಣದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿತ್ತು. ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದೆ. ಈ ವಿಮಾನದಲ್ಲಿ ಕೇವಲ ಇಬ್ಬರು ಮಾತ್ರ ಇದ್ದರು. ಪೈಲೆಟ್ ಹಾಗೂ ಕೋ ಪೈಲೆಟ್ ಇಬ್ಬರೇ ಇದ್ದರು. ಇಬ್ಬರು ವಿಮಾನ ಪತನದಲ್ಲಿ ಮೃತಪಟ್ಟಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

