ಯಾದಗಿರಿ: ಸುರಪುರ ತಾಲೂಕಿನಲ್ಲಿ ₹9,000 ಲಂಚಕ್ಕೆ ಬೇಡಿಕೆ ಇಟ್ಟ ಆರೋಪದ ಮೇಲೆ ಜೆಸ್ಕಾಂನ ಇಬ್ಬರು ಕಿರಿಯ ಇಂಜಿನಿಯರ್ಗಳನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ತಿಂಥಣಿ ಗ್ರಾಮದ ಭೈರಣ್ಣ ಅವರಿಗೆ ಸೇರಿದ ₹3.63 ಲಕ್ಷ ಮೌಲ್ಯದ ಕಾಮಗಾರಿ ಎಂಟು ತಿಂಗಳ ಹಿಂದೆಯೇ ಪೂರ್ಣಗೊಂಡಿತ್ತು. ಬಿಲ್ ಪಾವತಿ ಮತ್ತು ಕಡತ ವಿಲೇವಾರಿಗೆ ಆರೋಪಿಗಳು ₹9,000 ಲಂಚ ಕೇಳಿದ್ದು, ಮೊದಲ ಕಂತಿನ ₹3,000 ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಸಚಿನ್ ಯೇಡಕೆ ಹಾಗೂ ಶ್ರೀಶೈಲ್ ತಮ್ಮದಡ್ಡಿ ಬಂಧಿತ ಆರೋಪಿಗಳು. ಯಾದಗಿರಿ ಲೋಕಾಯುಕ್ತ ಠಾಣೆಯಲ್ಲಿ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news
