Breaking News

ಲೋಕಸಭೆಯಲ್ಲಿ ಬಿಜೆಪಿ ನಾಯಕರ ವಿರುದ್ಧ ಗುಡುಗಿದ ರಾಹುಲ್ ಗಾಂಧಿ

ನವದೆಹಲಿ : ನಾನು ತುಂಬಾ ಜೋರಾಗಿ ಅದಾನಿ ವಿರುದ್ಧ ಮಾತನಾಡಿದ್ದೆ, ನಿಮ್ಮ ಹಿರಿಯ ನಾಯಕರಿಗೆ ಇದರಿಂದ ಕಷ್ಟವಾಗಿದೆ. ಇದರ ಕುರಿತು ನಿಮ್ಮಲ್ಲಿ ಕ್ಷಮೆ ಕೇಳುತ್ತೇನೆ. ನನ್ನ ಬಿಜೆಪಿ ಸ್ನೇಹಿತರೆ ನೀವು ಹೆದರುವ ಅಗತ್ಯವಿಲ್ಲ ಯಾಕೆಂದರೆ ನನ್ನ ಭಾಷಣ ಅದಾನಿಯ ವಿರುದ್ಧ ಅಲ್ಲ ಎಂದು ಸಂಸದ ರಾಹುಲ್ ಗಾಂಧಿ ಲೋಕಸಭೆಯಲ್ಲಿ ಬಿಜೆಪಿ ನಾಯಕರ ವಿರುದ್ದ ಅಬ್ಬರಿಸಿದ್ದಾರೆ.

ಲೋಕಸಭೆಯಲ್ಲಿ ಇಂಡಿಯಾ ಮೈತ್ರಿಕೂಟ ಮಂಡಿಸಿರುವ ಅವಿಶ್ವಾಸ ನಿಲುವಳಿಯ ಮೇಲೆ ಮಾತನಾಡುತ್ತಿರುವ ಅವರು, ಈ ಬಾರಿಯ ಭಾಷಣ ಅದಾನಿ ದಾರಿಯಲ್ಲಿ ಮಾತನಾಡುತ್ತಿಲ್ಲ, ಬದಲಾಗಿ ಬೇರೆ ದಾರಿಯಲ್ಲಿ ಮಾತನಾಡುತ್ತೇನೆ ಇಂದು ತಲೆಯಿಂದ ಮಾತನಾಡುವುದಿಲ್ಲ ಹೃದಯದಿಂದ ಮಾತನಾಡುತ್ತಿದ್ದೇನೆ ಆದರೆ ಸತ್ಯದ ಗುಂಡನ್ನು ಹಾರಿಸುವೆ ಎಂದು ಹೇಳಿದರು.

ನಾನು 130 ದಿನಗಳಿಂದ ದೇಶದ ಒಂದು ಕಡೆಯಿಂದ ಇನ್ನೊಂದು ಕಡೆಗೆ ಪಾದಯಾತ್ರೆ ನಡೆಸಿ ಹಲವಾರು ಜನರೊಂದಿಗೆ ಬೆರೆತು ಅವರ ಕಷ್ಟಗಳನ್ನು ಅರಿತುಕೊಂಡಿದ್ದೇನೆ. ಯಾತ್ರೆಯು ಇನ್ನೂ ಪೂರ್ಣಗೊಂಡಿಲ್ಲ ಯಾರು ಗಾಬರಿಯಾಗುವ ಅವಶ್ಯಕತೆ ಇಲ್ಲ ಅದು ಇನ್ನೂ ಮುಂದುವರೆಯುತ್ತದೆ.

ಭಾರತ್ ಜೋಡೋ ಯಾತ್ರೆಯ ಸಮಯದಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಯಾಕೆ ಹೊರಟ್ಟಿದ್ದೀರಿ? ಎಂದು ಜನರು ಕೇಳಿದ್ದರು. ಆದರೆ ನನಗೂ ಇದರ ಬಗ್ಗೆ ಗೊತ್ತಿರಲಿಲ್ಲ ನಾನು ಯಾಕೆ ಈ ಯಾತ್ರೆಯನ್ನು ಕೈಗೊಳ್ಳುತ್ತಿದ್ದೇನೆ ಎಂಬುವುದು ನಿಜವಾಗಿಯೂ ನನಗೆ ಅರಿವಿರಲಿಲ್ಲ ಎಂದರು.

ಆದರೆ ಎಂಟು ವರ್ಷದ ಹುಡುಗಿ ನನಗೆ ನೀಡಿದ ಪತ್ರದಿಂದ ಜ್ಞಾನೋದಯವಾಯಿತು ಆಗಿನಿಂದಲೇ ಯಾತ್ರೆಯ ಮಹತ್ವವನ್ನು ತಿಳಿದುಕೊಂಡೆ, ಅಲ್ಲದೆ ನಾನು ನಿಮ್ಮೊಂದಿಗಿದ್ದೇನೆ ಎಂದು ನನ್ನನ್ನು ಬೆಂಬಲಿಸಿದ್ದಾಳೆ ಎಂದ ಅವರು ದಿನಾಲೂ ಬೆಳಿಗ್ಗೆಯಿಂದ ಸಂಜೆಯವರೆಗೆ ಬಡ, ಮಧ್ಯಮ ಸೇರಿದಂತೆ ಎಲ್ಲ ವರ್ಗದ ಜನರನ್ನು ಭೇಟಿಯಾಗಿದ್ದೇನೆ ಎಂದು ತಿಳಿಸಿದರು.

ಯಾವುದೇ ವಿಷಯಕ್ಕಾಗಿ ನಾನು ಸಾಯಲು ಸಿದ್ದ, ಯಾವ ವಿಷಯಕ್ಕೆ ಹತ್ತು ವರ್ಷ ಟೀಕೆಗೊಳಗಾಗಿದ್ದೇನೆ, ಯಾವ ವಿಷಯವು ನನ್ನ ಹೃದಯವನ್ನು ತುಂಬಾ ಗಟ್ಟಿಯಾಗಿ ಹಿಡಿದಿಟ್ಟುಕೊಂಡಿತ್ತು. ಇವತ್ತು ನಾನು ಆ ಭಾವನೆಗಳ ಸುತ್ತ ಇದ್ದೇನೆ ಎಂದ ಅವರು ಭಾರತವನ್ನು ಅಹಂಕಾರದಿಂದ ನೋಡಲಾಗುತ್ತಿತ್ತು ಅದು ಈಗ ಮಾಯವಾಗಿದೆ ಎಂದು ಪ್ರತಿಪಾದಿಸಿದರು.

Share News

About BigTv News

Check Also

ಸಚಿವರಿಗೆ ಖಾತೆ ಹಂಚಿದ ಸಿಎಂ ಡಿಕೆಶಿ..! ಯಾರಿಗೆ ಯಾವ ಖಾತೆ ಸಿಕ್ಕಿತು..?

ಡಿಕೆಶಿ ಸರ್ಕಾರದಲ್ಲಿ ಖಾತೆ ಫಿಕ್ಸ್..! ಕೆಲವರಿಗೆ ಹಳೆ ಖಾತೆ, ಕೆಲವರಿಗೆ ಹೊಸ ಜವಾಬ್ದಾರಿ..! ಬೆಂಗಳೂರು: ಸಚಿವರಿಗೆ ಖಾತೆ ಹಂಚಿದ ಸಿಎಂ …

Leave a Reply

Your email address will not be published. Required fields are marked *